ಅಮೇಠಿ:ಲೋಕಸಭಾ ಚುನಾವಣೆಯ ವೇಳೆ ಸ್ಮೃತಿ ಇರಾನಿ ಜೊತೆಗೆ ಗುರುತಿಸಿಕೊಂಡಿದ್ದ ಸುರೇಂದ್ರ ಸಿಂಗ್ ಹತ್ಯೆಯ ಕುರಿತಂತೆ ಉತ್ತರ ಪ್ರದೇಶ ಪೊಲೀಸರು ಮೂವರನ್ನು ಬಂಧಿಸಿದ್ಧಾರೆ.
50 ವರ್ಷದ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್ ಶನಿವಾರ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಲೋಕಸಭಾ ಫಲಿತಾಂಶದ ಬೆನ್ನಲ್ಲೇ ಅಮೇಠಿಯಲ್ಲಿ ನಡೆದ ಈ ಹತ್ಯೆ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು.
ಆಪ್ತನ ಶವ ಹೊರಲು ಹೆಗಲು ಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ: ವಿಡಿಯೋ ವೈರಲ್
ಹತ್ಯೆಗೆ ಸಂಬಂಧಿಸಿದಂತೆ ಸದ್ಯ ಮೂವರನ್ನು ಬಂಧಿಸಲಾಗಿದೆ. ಇನ್ನುಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಹನ್ನೆರಡು ಗಂಟೆಯ ಒಳಗಾಗಿ ತನಿಖೆ ಪೂರ್ಣಗೊಳಿಸುತ್ತೇವೆ ಎಂದು ಉತ್ತರ ಪ್ರದೇಶ ಡಿಜಿಪಿ ಒ.ಪಿ.ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಳೇ ವೈಷಮ್ಯವೇ ಕಾರಣ..!
ಫಲಿತಾಂಶ ಹೊರಬಿದ್ದ ಎರಡು ದಿನದಲ್ಲಿ ಕೊಲೆ ನಡೆದಿದ್ದರಿಂದ ರಾಜಕೀಯ ದ್ವೇಷ ಕಾರಣವಾಗಿರಬಹುದು ಎನ್ನುವ ಮಾತು ಕೇಳಿಬಂದಿತ್ತು.
ಸದ್ಯ ಪೊಲೀಸರು ಮೂವರನ್ನು ಬಂಧಿಸಿ ಸ್ಪಷ್ಟನೆ ನೀಡಿದ್ದು, ಕೊಲೆಗೆ ಹಳೆಯ ವೈಷಮ್ಯವೇ ಕಾರಣವಾಗಿದೆ. ರಾಜಕೀಯ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.