ನವದೆಹಲಿ: ಕಾಂಗ್ರೆಸ್ ಪಕ್ಷದ ಭದ್ರಕೋಟೆ ಹಾಗೂ ಮೂರು ಬಾರಿ ರಾಹುಲ್ ಗಾಂಧಿಗೆ ಜೈ ಅಂದಿದ್ದ ಮತದಾರ ಈ ಬಾರಿ ಅಮೇಠಿಯಲ್ಲಿ ಬಿಜೆಪಿಯ ಪ್ರಬಲ ಸ್ಪರ್ಧಿ ಸ್ಮೃತಿ ಇರಾನಿಯನ್ನು ಗೆಲ್ಲಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಬಲವಾದ ಹಿಡಿತ ಹೊಂದಿದ್ದ ಅಮೇಠಿ ಕೊನೆಗೂ 'ಕೈ' ತಪ್ಪಿಹೋಗಿದೆ. ಕಳೆದ ಬಾರಿ ಸೋಲಿನ ಸಾಧ್ಯತೆ ತೋರಿಸಿದ್ದ ಸ್ಮೃತಿ ಇರಾನಿ ಈ ಬಾರಿ ಸೋಲುಣಿಸಿದ್ದಾರೆ.
ಭರ್ಜರಿ ಗೆಲುವಿನ ಬಳಿಕ ಇಂದು ಮುಂಜಾನೆ ಟ್ವೀಟ್ ಮಾಡಿರುವ ಸ್ಮೃತಿ ಇರಾನಿ, ಅಮೇಠಿಯಲ್ಲಿ ಹೊಸ ಶಕೆ ಆರಂಭವಾಗಿದೆ ಎಂದಿದ್ಧಾರೆ.
ಅಭಿವೃದ್ಧಿಯ ಮೇಲೆ ನಂಬಿಕೆ ಇರಿಸಿದ ಅಮೇಠಿಯ ಜನತೆಗೆ ಚಿರಋಣಿಯಾಗಿರುತ್ತೇನೆ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
ಅಮೇಠಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯನ್ನು 55,000 ಮತಗಳ ಅಂತರದಿಂದ ಸೋಲಿಸಿದ್ದಾರೆ.