ಕರ್ನಾಟಕ

karnataka

ETV Bharat / briefs

76 ಎಸೆತಗಳಲ್ಲಿ 210 ರನ್​​​... ಚುಟುಕು ಕ್ರಿಕೆಟ್​ನಲ್ಲಿ ವಿಂಡೀಸ್​​​​​ ದಿಗ್ಗಜನ ವಿಶ್ವದಾಖಲೆ!

ವಿಂಡೀಸ್​ ಮಾಜಿ ಆಟಗಾರ ಚಂದ್ರಪಾಲ್​ ಟಿ-20 ಇತಿಹಾಸದಲ್ಲಿ ದ್ವಿಶತಕ ಸಿಡಿಸುವ ಮೂಲಕ ಚುಟುಕು ಕ್ರಿಕೆಟ್​ ಪಂದ್ಯದಲ್ಲಿ ಈ ಸಾಧನೆ ಮಾಡಿದ ಪ್ರಥಮ ಆಟಗಾರ ಎಂದೆಸಿನಿಸಿದ್ದಾರೆ.

Shivnarine Chanderpaul

By

Published : Apr 6, 2019, 7:18 PM IST

ಸೇಂಟ್​ ಮಾರ್ಟನ್: ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ ಶಿವನಾರಾಯಣ್ ಚಂದ್ರಪಾಲ್ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಸಿಡಿಸುವ ಮೂಲಕ ಚುಟುಕು ಕ್ರಿಕೆಟ್​​ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

44 ವರ್ಷದ ಚಂದ್ರಪಾಲ್ ಅವರು ಆ್ಯಡಂ ಸ್ಯಾನ್​ಫೋರ್ಡ್​ ಕ್ರಿಕೆಟ್​ ಫಾರ್​ ಲೈಫ್​ ಟಿ-20 ಟೂರ್ನಿಯಲ್ಲಿ ಕೇವಲ 76 ಎಸೆತಗಳಲ್ಲಿ ದ್ವಿಶತಕ ಸಿಡಿಸುವುದರ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಮೆರಿಕಾ ಮೂಲದ ಮ್ಯಾಡ್ ಡಾಗ್ಸ್ ತಂಡದ ವಿರುದ್ಧ ವೆಸ್ಟ್​ ಇಂಡೀಸ್​ನ ಮತ್ತೊಬ್ಬ ದಿಗ್ಗಜ ಡ್ವೇನ್​ ಸ್ಮಿತ್​ರೊಡನೆ ಆರಂಭಿಕರಾಗಿ ಬ್ಯಾಟಿಂಗ್​ಗೆ​ ಇಳಿದ ಚಂದ್ರಪಾಲ್ ಕೇವಲ 76 ಎಸೆತಗಳಲ್ಲಿ 25 ಬೌಂಡರಿ, 13 ಸಿಕ್ಸರ್​ಗಳಿಂದ 210 ರನ್ ಬಾರಿಸಿದ್ದಾರೆ. ಸ್ಮಿತ್​ 29 ಎಸೆತಗಳಲ್ಲಿ 54 ರನ್​ ಬಾರಿಸಿ ತಂಡದ ಮೊತ್ತವನ್ನು 303ಕ್ಕೆ ಕೊಂಡೊಯ್ದಿದ್ದಾರೆ. ಈ ಪಂದ್ಯದಲ್ಲಿ ಚಂದ್ರಪಾಲ್​ ಟೀಂ​ ಬರೋಬ್ಬರಿ 192 ರನ್​ ಗಳಿಂದ ಜಯ ಸಾಧಿಸಿದೆ.

2015 ರಲ್ಲಿ ವಿಂಡೀಸ್​ ತಂಡ ಚಂದ್ರಪಾಲ್​ ಅವರನ್ನು ತಂಡದಿಂದ ಕೈಬಿಟ್ಟಿತ್ತು. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಚಂದ್ರಪಾಲ್​ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಇಂದಿಗೂ ತಮ್ಮ ಪ್ರದರ್ಶನ ಮುಂದುವರಿಸಿದ್ದಾರೆ.

ಚಂದ್ರಪಾಲ್​ ಏಕದಿನ ಕ್ರಿಕೆಟ್​ನಲ್ಲಿ 8778 ರನ್​, ಟೆಸ್ಟ್​ ಕ್ರಿಕೆಟ್​ನಲ್ಲಿ 11867 ರನ್ ​ಗಳಿಸಿದ್ದಾರೆ. ಟೆಸ್ಟ್​ನಲ್ಲಿ 30 ಶತಕ, ಏಕದಿನದಲ್ಲಿ 11 ಶತಕ ಸಿಡಿಸಿದ್ದಾರೆ.

ABOUT THE AUTHOR

...view details