ಕರ್ನಾಟಕ

karnataka

ETV Bharat / briefs

ಹಳ್ಳಕ್ ಬಿದ್ರೇ ಆಳಿಗೊಂದ್ ಕಲ್ಲು.. ವಿಶ್ವಕಪ್‌ಗೆ ಕೊಹ್ಲಿ ಬದಲು ರೋಹಿತ್​ಗೆ ಕ್ಯಾಪ್ಟನ್ ಪಟ್ಟ ಕಟ್ಟಿ.. - RCB

ಅರ್​ಸಿಬಿ ಈ ಬಾರಿಯ ಐಪಿಎಲ್​ನಲ್ಲಿ ಸಾಲುಸಾಲು ಸೋಲುಕಾಣುತ್ತರುವುದಕ್ಕೆ ಬೇಸತ್ತಿರುವ ಕ್ರಿಕೆಟ್​ ಅಭಿಮಾನಿಗಳು ಮುಂಬರುವ ವಿಶ್ವಕಪ್​ಗೆ ಕೊಹ್ಲಿಯ ಬದಲು ರೋಹಿತ್​ ಶರ್ಮಾರನ್ನ ನಾಯಕನನ್ನಾಗಿ ಮಾಡಬೇಕು ಎನ್ನುತ್ತಿದ್ದಾರೆ.

Rohit Sharma

By

Published : Apr 7, 2019, 8:56 PM IST

ಮುಂಬೈ: 12 ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಿರುವ 6 ಪಂದ್ಯಗಳಲ್ಲೂ ಸೋಲು ಕಾಣುತ್ತಿರುವ ಆರ್​ಸಿಬಿ ತಂಡದ ನಾಯಕನಾಗಿರುವ ಕೊಹ್ಲಿಯನ್ನು ವಿಶ್ವಕಪ್​ ತಂಡಕ್ಕೆ ನಾಯಕನನ್ನಾಗಿ ಮಾಡುವುದು ಬೇಡ ಎಂಬ ಮಾತುಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿವೆ.

ಟ್ವಿಟರ್​

ಸತತ 6ನೇ ಸೋಲುಕಂಡ ಆರ್​ಸಿಬಿ ಐಪಿಎಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ನಾಯಕತ್ವದಲ್ಲಿ ಪದೇಪದೆ ಕೊಹ್ಲಿ ವಿಫಲರಾಗುತ್ತಿದ್ದಾರೆ. ತಂಡದ ಆಯ್ಕೆ, ಫೀಲ್ಡಿಂಗ್​ ಸಂಯೋಜನೆಯಲ್ಲಿ ಕೊಹ್ಲಿ ವಿಫಲರಾಗುತ್ತಿರುವ ಕಾರಣ ಕೊಹ್ಲಿಗೆ ಭಾರತ ತಂಡದ ನಾಯಕತ್ವ ನೀಡುವ ಬದಲು ಮುಂಬೈ ತಂಡದ ನಾಯಕನಾಗಿರುವ ರೋಹಿತ್​ ಶರ್ಮಾಗೆ ನೀಡಬೇಕು ಎಂದು ಟ್ವಿಟರ್​ನಲ್ಲಿ ಅಭಿಮಾನಿಗಳು ಬೇಡಿಕೆಯಿಡುತ್ತಿದ್ದಾರೆ.

ಟ್ವಿಟರ್​

ಮುಂಬೈ ತಂಡ ಶನಿವಾರ ಹೈದರಾಬಾದ್​ನಂತಹ ಬಲಿಷ್ಠ ತಂಡಕ್ಕೆ 137 ರನ್​ಗಳ ಟಾರ್ಗೆಟ್​ ನೀಡಿ 40 ರನ್​ಗಳಿಂದ ಗೆಲುವು ಸಾಧಿಸಿತ್ತು. ಕಡಿಮೆ ರನ್​ ಟಾರ್ಗೆಟ್​ ನೀಡಿದರೂ ರೋಹಿತ್​ ಶರ್ಮಾ ತಮ್ಮ ಕ್ಷೇತ್ರ ರಕ್ಷಣೆ ಸಂಯೋಜನೆ, ಬೌಲರ್​ಗಳ ಆಯ್ಕೆಯಿಂದ ತಂಡಕ್ಕೆ ಗೆಲುವು ದೊರೆಕಿಸಿಕೊಟ್ಟಿದ್ದರು.

ಆದರೆ, ಕೊಹ್ಲಿ ತಂಡ 200 ರನ್​ಗಳಿಸಿದರೂ ಪಂದ್ಯ ಗೆಲ್ಲಲು ವಿಫಲವಾಗುತ್ತಿದೆ. ಸಾಲು ಸಾಲು ಸೋಲುಗಳಿಂದ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇದು ವಿಶ್ವಕಪ್​ನಲ್ಲಿ ಭಾರತಕ್ಕೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಕೆಲವರ ವಾದವಾಗಿದೆ.

ಟ್ವಿಟರ್​

ಮತ್ತೆ ಕೆಲವರು ಕೊಹ್ಲಿ ಒಬ್ಬ ಅದ್ಭುತ ಬ್ಯಾಟ್ಸ್​ಮನ್​ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ, ನಾಯಕತ್ವ ನಿಭಾಯಿಸುವುದರಲ್ಲಿ ಕೊಹ್ಲಿಗಿಂತ ರೋಹಿತ್​ ಉತ್ತಮ. ಆದ್ದರಿಂದ ಕೊಹ್ಲಿ ಬ್ಯಾಟ್ಸ್​ಮನ್​ ಆಗಿ ಆಡಿದರೆ ಒಳೀತು ಎನ್ನುತ್ತಿದ್ದಾರೆ.

ಟ್ವಿಟರ್​

ಅಭಿಮಾನಿಗಳು ಅಭಿಪ್ರಾಯ ಏನೇ ಆದರೂ ರೋಹಿತ್​ ಇತ್ತೀಚೆಗಷ್ಟೇ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಐಪಿಎಲ್​​ನಲ್ಲಿ ಆಟಗಾರರು ನೀಡುವ ಪ್ರದರ್ಶನದ ಮೇಲೆ ವಿಶ್ವಕಪ್​ ತಂಡಕ್ಕೆ ಆಯ್ಕೆಮಾಡಲಾಗುವುದಿಲ್ಲ, ಬದಲಾಗಿ ಕಳೆದ 4 ವರ್ಷಗಳಿಂದ ಸೀಮಿತ ಓವರ್​ಗಳ ಆಟದಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಬೇಕು ಎಂದಿದ್ದರು.

ಟ್ವಿಟರ್​

ರೋಹಿತ್​ ಹೇಳಿಕೆಯಂತೆ ನೋಡುವುದಾದರೆ ಕೊಹ್ಲಿ ಕಳೆದ 4 ವರ್ಷಗಲ್ಲಿ ಸಹಸ್ರಾರು ರನ್​ಗಳಿಸಿದ್ದಾರೆ. ನಾಯಕತ್ವದಲ್ಲಿ ಇಂಗ್ಲೆಂಡ್​,ಕಿವೀಸ್, ಆಸ್ಟ್ರೇಲಿಯಾ,ದ.ಆಫ್ರಿಕಾ ನೆಲದಲ್ಲಿ ಸರಣಿಗಳನ್ನು ಗೆದ್ದು ದಾಖಲೆ ಮಾಡಿದ್ದಾರೆ. ಇದನ್ನು ಗಮನಿಸಿದರೆ ಕೇವಲ ಐಪಿಎಲ್​ನಿಂದ ಕೊಹ್ಲಿಯಂತಹ ವಿಶ್ವಶ್ರೇಷ್ಠ ನಾಯಕ,ಆಟಗಾರನ ಚತುರತೆಯನ್ನು ಅಳೆಯುವುದು ಕೂಡ ಸೂಕ್ತವಲ್ಲ.

ABOUT THE AUTHOR

...view details