ಕರ್ನಾಟಕ

karnataka

ETV Bharat / briefs

ಚಿಕಿತ್ಸೆಗೆಂದು ಬಂದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ! - ಸವಾಯ್ ಮಾನ್​ಸಿಂಗ್ ಮೆಡಿಕಲ್​ ಕಾಲೇಜ್

ಜೈಪುರದ ಸವಾಯ್ ಮಾನ್​ಸಿಂಗ್ ಮೆಡಿಕಲ್​ ಕಾಲೇಜ್ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯನ್ನು ಅಲ್ಲಿನ ವೈದ್ಯ ಮನಸೋ ಇಚ್ಛೆ ಹೊಡೆದಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

ಡಾಕ್ಟರ್

By

Published : Jun 3, 2019, 9:10 PM IST

ಜೈಪುರ:ವೈದ್ಯೋ ನಾರಾಯಣೋ ಹರಿ..! ಎನ್ನುವ ಮಾತು ತುಂಬಾ ಜನಜನಿತ. ವೈದ್ಯರು ಸಾಕ್ಷಾತ್ ದೇವರ ಸ್ವರೂಪ ಎನ್ನುವುದು ಈ ಶ್ಲೋಕದ ತಾತ್ಪರ್ಯ. ಆದರೆ ವೈದ್ಯರೇ ಯಮಸ್ವರೂಪಿಯಾದರೆ ಹೇಗಿರುತ್ತದೆ ಎನ್ನುವುದಕ್ಕೆ ಜೈಪುರದಲ್ಲಿ ನಡೆದ ಘಟನೆಯೇ ಸಾಕ್ಷಿ.

ಹೆರಿಗೆ ಮಾಡಲು ವೈದ್ಯರ ನಿರಾಸಕ್ತಿ.. ತನ್ನ ಹೆರಿಗೆ ತಾನೇ ಮಾಡಿಕೊಂಡ ಗಟ್ಟಿಗಿತ್ತಿ.. ಮಗು-ಬಾಣಂತಿ ಇಬ್ಬರೂ ಸೇಫ್‌!

ಜೈಪುರದ ಸವಾಯ್ ಮಾನ್​ಸಿಂಗ್ ಮೆಡಿಕಲ್​ ಕಾಲೇಜ್ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೋರ್ವನನ್ನು ಅಲ್ಲಿನ ವೈದ್ಯ ಮನಸೋ ಇಚ್ಛೆ ಹೊಡೆದಿದ್ದಾನೆ. ಆಸ್ಪತ್ರೆಯ ಬೆಡ್ ಮೇಲೆ ಕುಳಿತಿದ್ದ ರೋಗಿ ಬಳಿ ಬಂದ ಡಾಕ್ಟರ್ ಏಕಾಏಕಿ ಬಾರಿಸಿದ್ದಾನೆ. ಇದೇ ವೇಳೆ ಮತ್ತೊಬ್ಬ ಡಾಕ್ಟರ್ ಬಂದು, ಆತನನ್ನು ಸ್ಥಳದಿಂದ ದೂರಕ್ಕೆ ಕರೆದುಕೊಂಡು ಹೋಗುತ್ತಾನೆ. ವೈದ್ಯ ಪಿತ್ತ ನೆತ್ತಗೇರಿ ಹೊಡೆಯಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಆರೋಗ್ಯ ಸಚಿವ ರಘು ಶರ್ಮ ಘಟನೆಯ ಕುರಿತಾಗಿ ಸಂಪೂರ್ಣ ಮಾಹಿತಿ ನೀಡುವಂತೆ ಆಸ್ಪತ್ರೆಯ ಮಂಡಳಿಗೆ ಆದೇಶಿಸಿದ್ದಾರೆ.

ABOUT THE AUTHOR

...view details