ಕರ್ನಾಟಕ

karnataka

ETV Bharat / briefs

ರಸೆಲ್​ ಅಬ್ಬರ... ಕೆಕೆಆರ್​ಗೆ 5 ವಿಕೆಟ್​ಗಳ ಜಯ, ಆರ್​ಸಿಬಿಗೆ 5 ನೇ ಸೋಲು - BCCI

12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್​ನಲ್ಲಿ ಸಕ್ಸಸ್​ ಕಂಡ ಆರ್​ಸಿಬಿ 20 ಓವರ್​ಗಳಲ್ಲಿ 205ರನ್​ಗಳಿಸಿತು. ಇದಕ್ಕುತ್ತರವಾಗಿ ಕೆಕೆಆರ್​ 19.1 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ಗುರಿತಲುಪಿ ತನ್ನ ಮೂರನೇ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ರಸೆಲ್​

By

Published : Apr 6, 2019, 4:40 PM IST

ಬೆಂಗಳೂರು: ತಮ್ಮ ಅಬ್ಬರದ ಆಟ ಮುಂದುವರಿಸಿದ ರೆಸೆಲ್​ ಚೊಚ್ಚಲ ಗೆಲುವಿನ ಆಸೆ ಇಟ್ಟುಕೊಂಟಿದ್ದ ಬೆಂಗಳೂರಿಗೆ ನಿರಾಸೆ ಮೂಡಿಸಿದರು,

12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್​ನಲ್ಲಿ ಸಕ್ಸಸ್​ ಕಂಡ ಆರ್​ಸಿಬಿ 20 ಓವರ್​ಗಳಲ್ಲಿ 205ರನ್​ಗಳಿಸಿತು. ಇದಕ್ಕುತ್ತರವಾಗಿ ಕೆಕೆಆರ್​ 19.1 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ಗುರಿತಲುಪಿ ತನ್ನ ಮೂರನೇ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಆರ್​ಸಿಬಿಗೆ ಪಾರ್ಥಿವ್​ ಪಟೇಲ್​ 25, ವಿರಾಟ್​ ಕೊಹ್ಲಿ 84, ಎಬಿ ಡಿ ವಿಲಿಯರ್ಸ್​ 63, ಮಾರ್ಕಸ್​ ಸ್ಟೋನಿಸ್​ 28 ರನ್​ಗಳಿಸಿ ತಂಡದ ಮೊತ್ತ 200 ಗಡಿ ದಾಟುವಂತೆ ಮಾಡಿದರು.

206ರನ್​ಗಳ ಗುರಿ ಪಡೆದ ಕೆಕೆಆರ್​ ಆರಂಭದಿಂದಲೂ ಆರ್​ಸಿಬಿ ಬೌಲಿಂಗ್​ ದಾಳಿಯನ್ನು ಪುಡಿಗಟ್ಟುತು. ಆರಂಭಿಕರಾದ ಕ್ರಿಸ್​ ಲಿನ್​ 43,ನರೈನ್​ 10, ರಾಬಿನ್​ ಉತ್ತಪ್ಪ 33, ನಿತಿಸ್​ ರಾಣಾ 37, ದಿನೇಶ್​ ಕಾರ್ತಿಕ್​ 19, ಆ್ಯಂಡ್ರ್ಯೂ ರಸೆಲ್ 13 ಬಾಲ್​ಗೆ 48ರನ್​ ಬಾರಿಸಿ ಆರ್​ಸಿಬಿಯಿಂದ ಗೆಲುವನ್ನು ಕಿತ್ತುಕೊಂಡರು.

ABOUT THE AUTHOR

...view details