ನವದೆಹಲಿ:ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಮ್ಯೂಕೋರಮೈಕೋಸಿಸ್ (black fungus)ನ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ, ಫಂಗಸ್ಗಳು ಮಾನವನ ಸಣ್ಣ ಮತ್ತು ದೊಡ್ಡ ಕರುಳುಗಳ ಮೇಲೆ ತೀವ್ರ ಹಾನಿಯನ್ನು ಉಂಟು ಮಾಡುತ್ತಿದೆ ಎಂದು ಕಂಡು ಬಂದಿದೆ.
ಆಸ್ಪತ್ರೆ ಒದಗಿಸಿದ ಮಾಹಿತಿಯ ಪ್ರಕಾರ, ಮೇ 13 ರಂದು 49 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯಲ್ಲಿ ಹೊಟ್ಟೆನೋವು, ವಾಂತಿ, ಮಲಬದ್ಧತೆಯಂತಹ ಸಮಸ್ಯೆಗಳು ಕಂಡು ಬಂದವು. ಈ ಹಿಂದೆ ಆಕೆಗೆ ಸ್ತನ ಕ್ಯಾನ್ಸರ್ ಇದ್ದ ಕಾರಣ ಸ್ತನವನ್ನು ತೆಗೆಯಲಾಗಿತ್ತು. ಅವಳ ಕೀಮೋಥೆರಪಿ 4 ವಾರಗಳ ಹಿಂದೆ ಮುಗಿದಿದೆ. ಈ ಬಳಿಕ ಸಿಟಿ ಸ್ಕ್ಯಾನ್ ಮಾಡಿದಾಗ, ಮಹಿಳೆಯ ಹೊಟ್ಟೆಯಲ್ಲಿ ವಿಭಿನ್ನ ತರದ ಸ್ವಲ್ಪ ಗಾಳಿ ಮತ್ತು ದ್ರವ ಕಾಣಿಸಿಕೊಂಡಿದ್ದು, ಇದು ಸಣ್ಣ ಕರುಳಿನಲ್ಲಿ ರಂಧ್ರವನ್ನು ಸೂಚಿಸುತ್ತಿತ್ತು.