ಕರ್ನಾಟಕ

karnataka

ETV Bharat / briefs

ಹಳೆ ಮುಖಗಳಿಗೆ ಮಣೆ, ಹೊಸಬರಿಗೂ ಚಾನ್ಸ್! ಹೊಸ ಸರ್ಕಾರದಲ್ಲಿ ಇವರಿಗೆಲ್ಲಾ ಸಚಿವಗಿರಿ!

ಸಂಜೆ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಯಾರೆಲ್ಲಾ ಮೋದಿ ಸಚಿವ ಸಂಪುಟ ಸೇರಲಿದ್ದಾರೆಂಬ ಕುತೂಹಲಕ್ಕೆ ಇದೀಗ ಬ್ರೇಕ್​ ಬಿದ್ದಿದ್ದು, ಸಂಪುಟ ಸೇರಲಿರುವ ನಾಯಕರುಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.

ಮೋದಿ ಕ್ಯಾಬಿನೆಟ್​

By

Published : May 30, 2019, 1:14 PM IST

ನವದೆಹಲಿ:ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಕೇಂದ್ರದಲ್ಲಿ 2ನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ರಾಷ್ಟ್ರಪತಿ ಭವನದಲ್ಲಿ ಸಂಜೆ 7 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದೆ.

ಪ್ರಮಾಣ ವಚನ ಕಾರ್ಯಕ್ರಮಕ್ಕೂ ಮುಂಚಿತವಾಗಿ ಅಮಿತ್​ ಶಾ, ನರೇಂದ್ರ ಮೋದಿ ಬರೋಬ್ಬರಿ 3 ಗಂಟೆಗಳ ಕಾಲ ಚರ್ಚೆ ನಡೆಸಿ ಸಂಪುಟ ಸಚಿವರ ಹೆಸರು ಫೈನಲ್​ ಮಾಡಿದ್ದು, ಇದೀಗ ಅವರಿಗೆ ಫೋನ್​ ಕಾಲ್ ಮಾಡಿ ದೆಹಲಿಗೆ ದೌಡಾಯಿಸುವಂತೆ ತಿಳಿಸಲಾಗುತ್ತಿದೆ.

ಇಲ್ಲಿಯವರೆಗೂ ಸಿಕ್ಕ ಮಾಹಿತಿ ಪ್ರಕಾರ ಸ್ಮೃತಿ ಇರಾನಿ,ಪಿಯೂಷ್​ ಗೋಯಲ್​, ರವಿಶಂಕರ್​ ಪ್ರಸಾದ್​,ನಿರ್ಮಲಾ ಸೀತಾರಾಮನ್​,ಡಿ.ವಿ ಸದಾನಂದಗೌಡ, ಪ್ರಹ್ಹಾದ್ ಜೋಶಿ, ಸುರೇಶ್​ ಅಂಗಡಿ, ಪ್ರಕಾಶ್ ಜಾವ್ಡೇಕರ್​, ರಾಮದಾಸ್​ ಅಠಾವಳೆ, ರಾಜನಾಥ್​ ಸಿಂಗ್​ ,ಮುಖ್ತಾರ್​ ಅಬ್ಬಾಸ್​ ನಖ್ವಿ, ಬಾಬುಲ್​ ಸುಪ್ರೀಯಾ,ಕಿರಣ್​ ರಿಜಿಜು, ಅರ್ಜುನ್​ ರಾಮ್ ಮೇಘಾವಲ್​ಗೆ ದೂರವಾಣಿ ಕರೆ ಮೂಲಕ ದೆಹಲಿಗೆ ಬರುವಂತೆ ತಿಳಿಸಲಾಗಿದೆ.

ಇದರ ಜತೆಗೆ ನಿತಿನ್​ ಗಡ್ಕರಿ, ಸುಷ್ಮಾ ಸ್ವರಾಜ್, ಗಿರಿರಾಜ್ ಸಿಂಗ್, ನಿತ್ಯಾನಂದ್​ ರಾಯ್​, ಸಜೀವ್​ ಬಲಿಯಾನ್​,ಅನುಪ್ರಿಯಾ ಪಟೇಲ್​, ತಾವರ್ ಚಂದ್​ ಗೆಹ್ಲೋಟ್​ ಹಾಗೂ ಹರ್‌ಸಿಮ್ರತ್ ಕೌರ್‌,​ ಕಿಶನ್​ ರೆಡ್ಡಿ, ಪುರುಷೋತ್ತಮ್ ರೂಪಲ್​, ಮನ್​ಸುಕ್, ಸಂತೋಷ್​ ಗಂಗ್ವಾರ್​, ರಾವ್​ ಇಂದ್ರಿಜಿತ್​​,ಅರವಿಂದ್​ ಸಾವಂತ್​​​ ಅವರಿಗೆ ಅಮಿತ್​ ಶಾ ದೂರವಾಣಿ ಕರೆ ಮಾಡಿದ್ದಾರೆ.

ಸಂಜೆ 4.30ಕ್ಕೆ ಎಲ್ಲರೂ ನರೇಂದ್ರ ಮೋದಿ ಭೇಟಿಯಾಗಲಿದ್ದು, ಸಂಜೆ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.

ABOUT THE AUTHOR

...view details