ನವದೆಹಲಿ: ಉತ್ತರ ಪ್ರದೇಶದ ಅಮೇಠಿ ಎನ್ನುವ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕಳೆದ ನಾಲ್ಕು ದಶಕದಿಂದ ಗಾಂಧಿ ಕುಟುಂಬದ ಹೊರತಾದ ಆಲೋಚನೆಯೇ ಇಲ್ಲಿ ಇರಲಿಲ್ಲ. ಇಂತಹ ಭದ್ರಕೋಟೆಯನ್ನು ಸ್ಮೃತಿ ಇರಾನಿ ಎನ್ನುವ ಗಟ್ಟಿಗಿತ್ತಿ ಭೇದಿಸಿ ಕಮಲ ಬಾವುಟವನ್ನು ನೆಟ್ಟಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಮೊದಲ ಬಾರಿಗೆ ಎದುರಾಗಿದ್ದು ಸ್ಮೃತಿ ಇರಾನಿ ಭರ್ಜರಿ ಫೈಟ್ ನೀಡಿದ್ದರು. ಭಾರಿ ಅಂತರದಲ್ಲಿ ನಿರಾಯಾಸ ಗೆಲುವು ಸಾಧಿಸುತ್ತಿದ್ದ ರಾಗಾ 2014 ಲೋಕಸಮರದಲ್ಲಿ ಜಸ್ಟ್ ಒಂದು ಲಕ್ಷ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ರಾಹುಲ್ಗೆ ಸೋಲುಣಿಸಿರುವ ಸ್ಮೃತಿ ಇರಾನಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನ ಹಿಂದೆ ವರ್ಷಗಳ ಶ್ರಮ, ಹೋರಾಟವಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
ಆಪ್ತನ ಶವ ಹೊರಲು ಹೆಗಲು ಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ: ವಿಡಿಯೋ ವೈರಲ್
ಹ್ಯಾಟ್ರಿಕ್ ಗೆಲುವು ಸಾಧಿಸಿದ ಹೊರತಾಗಿಯೂ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಸಂಪೂರ್ಣವಾಗಿ ಸೋತಿದ್ದರು. ಇದೇ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಸ್ಮೃತಿ ಇರಾನಿ ಪ್ರಚಾರದಲ್ಲಿ ರಾಹುಲ್ ಮೇಲೆ ವಾಗ್ದಾಳಿ ನಡೆಸಿದ್ದರು.
ಐದು ವರ್ಷ, 60 ಭೇಟಿ:
2014 ಸೋಲಿನಲ್ಲೇ ಮುಂದಿನ ಚುನಾವಣೆಯ ಗೆಲುವನ್ನು ಸ್ಮೃತಿ ಕಂಡಿದ್ದರು. ಹೀಗಾಗಿ ಅಮೇಠಿಯಲ್ಲಿ ಕಮಲ ಬಾವುಟ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. 2014ರಿಂದ 2019ರವರೆಗಿನ ಐದು ವರ್ಷದಲ್ಲಿ ಸ್ಮೃತಿ ಇರಾನಿ ಸುಮಾರು 60 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಮೂಲಕ ಉತ್ತಮ ಜನಸಂಪರ್ಕವನ್ನು ಬೆಳೆಸಿದ್ದರು.
ಬೂಸ್ಟ್ ನೀಡಿದ 2017ರ ವಿಧಾನಸಭಾ ಗೆಲುವು:
ಲೋಕಸಭಾ ಚುನಾವಣೆ ನಡೆದ ಮೂರು ವರ್ಷದ ಬಳಿಕ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಅಮೇಠಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಇದು ಸಹಜವಾಗಿಯೇ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ನೀಡಿತ್ತು. ಜೊತೆಗೆ ತಮ್ಮ ಕಾರ್ಯ ವರ್ಕೌಟ್ ಆಗ್ತಿದೆ ಅನ್ನೋ ಸೂಚನೆ ದೊರೆತಿತ್ತು.