ಹುಬ್ಬಳ್ಳಿ: ಮತದಾರರು ಯಾರು ಹೀರೋ ಇನ್ಯಾರು ಜೋಕರ್ ಎಂಬುದನ್ನು ನಿರ್ಧರಿಸುತ್ತಾರೆ ಎನ್ನುವ ಮೂಲಕ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಹಾಗೂ ರಾಹುಲ್ ಅವರ ಬಾಡಿ ಲಾಂಗ್ವೇಜ್, ಅವರ ವಿಚಾರಧಾರೆ ನೋಡಿದರೆ ಜೋಕರ್ ಥರಾನೇ ಅನಿಸುತ್ತದೆ. ಈ ಬಗ್ಗೆ ಜನರೇ ಯಾರು ಹೀರೋ ಯಾರು ಜೋಕರ್ಸ್ ಎಂಬುದನ್ನು ನಿರ್ಧರಿಸುತ್ತಾರೆ ಎಂದರು.