ಕರ್ನಾಟಕ

karnataka

ETV Bharat / briefs

ಝಾನ್ಸಿಯಲ್ಲಿ ಪ್ರಿಯಾಂಕಾ ರೋಡ್ ಶೋ... ಕೈ ಅಭ್ಯರ್ಥಿಗಳ ಪರ ಮತಯಾಚನೆ! - ಕಾಂಗ್ರೆಸ್​ ಅಭ್ಯರ್ಥಿ

ಇದೇ ಮೊದಲ ಸಲ ಝಾನ್ಸಿಯಲ್ಲಿ ರೋಡ್​ ಶೋ ನಡೆಸಿದ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್​ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದರು.

ಪ್ರಿಯಾಂಕಾ ರೋಡ್​ ಶೋ

By

Published : Apr 25, 2019, 3:57 PM IST

ಝಾನ್ಸಿ:ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಉತ್ತರಪ್ರದೇಶದ ಝಾನ್ಸಿಯಲ್ಲಿ ಬೃಹತ್​ ರೋಡ್​ ಶೋ ನಡೆಸಿ, ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಪ್ರಿಯಾಂಕಾ ರೋಡ್​ ಶೋ

ಮಾಜಿ ಕೇಂದ್ರ ಸಚಿವ ಪ್ರದೀಪ್​ ಜೈನ್​ ಆದಿತ್ಯ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಶಿವ ಶರಣ ಕುಸ್ವಾ ಪರ ಮತಯಾಚನೆ ನಡೆಸಿದ ಪ್ರಿಯಾಂಕಾ ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರೋಡ್​ ಶೋ ನಡೆಸುತ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಮೇಲೆ ಹೂವಿನ ಸುರಿಮಳೆಗೈಯಲಾಗಿದ್ದು, ಸಾವಿರಾರು ಕಾರ್ಯಕರ್ತರು ಈ ವೇಳೆ ಸಾಥ್​ ನೀಡಿದ್ದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡುವ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಕಣಕ್ಕಿಳಿಯುತ್ತಾರೆಂಬ ಮಾತು ಕೇಳಿ ಬಂದಿತ್ತು. ಆದರೆ ಕಾಂಗ್ರೆಸ್​ ಪ್ರಧಾನಿ ಮೋದಿ ವಿರುದ್ಧ ಐದು ಸಲ ಶಾಸಕನಾಗಿದ್ದ ಅಜಯ್​ ರೈ ಅವರನ್ನ ಕಣಕ್ಕಿಳಿಸಿದೆ.

ABOUT THE AUTHOR

...view details