ಬೆಗುಸರೈ(ಬಿಹಾರ): ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಸಿಪಿಐ ಅಭ್ಯರ್ಥಿಯಾಗಿ ಬಿಹಾರದ ಬೆಗುಸರೈ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಅವರ ಪರ ನಟ ಪ್ರಕಾಶ್ ರೈ ಕ್ಯಾಂಪೇನ್ ಮಾಡಿದರು.
ಕನ್ಹಯ್ಯ ಪರ ಪ್ರಕಾಶ್ ರೈ ಪ್ರಚಾರ, ಮೋದಿ ವಿರುದ್ಧ ವಾಗ್ಜರಿ - ಕನ್ಹಯ್ಯ ಕುಮಾರ್
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಪ್ರಕಾಶ್ ರೈ, ಇಂದು ಬಿಹಾರದ ಬೆಗುಸರೈನಲ್ಲಿ ಕನ್ಹಯ್ಯ ಕುಮಾರ್ ಪರ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ರೈ, ಒಂದು ವೇಳೆ ದೇವರು ನನ್ನ ಮುಂದೆ ಪ್ರತ್ಯಕ್ಷವಾಗಿ, ಕನ್ಹಯ್ಯ ಹಾಗೂ ನೀನು ಇಬ್ಬರಲ್ಲಿ ಯಾರನ್ನು ಗೆಲ್ಲಿಸಿ ಸಂಸತ್ಗೆ ಕಳುಹಿಸಬೇಕು ಎಂದು ಕೇಳಿದರೆ, ನಾನು ಕನ್ಹಯ್ಯನನ್ನೇ ಸಂಸತ್ಗೆ ಕಳುಹಿಸುವಂತೆ ಹೇಳುವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ರೈ, ದೇಶದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಮೋದಿ, ಬಡವರ ಅಭಿವೃದ್ಧಿಗಾಗಿ ಯಾವುದೇ ಯೋಜನೆ ಕೈಗೊಂಡಿಲ್ಲ. ಪ್ರತಿಯೊಂದು ಸಮಾರಂಭಗಳಲ್ಲೂ ಅಭಿವೃದ್ಧಿ ಬಗ್ಗೆ ಮಾತನಾಡುವ ಅವರು, ವೋಟ್ ಬ್ಯಾಂಕ್ಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು. ಹಿಂದೂ-ಮುಸ್ಲಿಂಮರ ಮಧ್ಯೆ ಜಗಳವಾಗಲು ಮೋದಿ ನೇರ ಕಾರಣ ಎಂದು ಇದೇ ವೇಳೆ ರೈ ಆರೋಪಿಸಿದರು.