ಕರ್ನಾಟಕ

karnataka

ETV Bharat / briefs

ವಿಶ್ವಕಪ್​ ಗೆಲ್ಲಲು ಮತ್ತಷ್ಟು ಸರ್ಕಸ್​: ಪಾಕ್​​​ ತಂಡದಲ್ಲಿ ಮತ್ತಷ್ಟು ಬದಲಾವಣೆ​, ಮೂವರಿಗೆ ಚಾನ್ಸ್​! - ಮಹತ್ವದ ಬದಲಾವಣೆ

ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಈಗಾಗಲೇ 4 ಪಂದ್ಯಗಳನ್ನ ಕೈಚೆಲ್ಲಿರುವ ಪಾಕಿಸ್ತಾನ ತಂಡ ಮುಖಭಂಗಕ್ಕೊಳಗಾಗಿದ್ದು, ಮುಂಬರುವ ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ತಂಡದಲ್ಲಿ ಹೊಸ ಬದಲಾವಣೆ ಮಾಡಿದೆ.

ಪಾಕ್​​​ ತಂಡದಲ್ಲಿ ಮತ್ತಷ್ಟು ಚೇಂಜ್

By

Published : May 20, 2019, 5:37 PM IST

ಲಾಹೋರ್​:ಮೇ.30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್​​ಗಾಗಿ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಮಹತ್ವದ ಬದಲಾವಣೆ ಮಾಡಿ ತಂಡ ಪ್ರಕಟಗೊಳಿಸಿದೆ. ಈ ಹಿಂದೆ ಆಯ್ಕೆ ಮಾಡಿದ್ದ ತಂಡದಲ್ಲಿ ಅನೇಕ ಹೊಸ ಮುಖ ಸೇರ್ಪಡೆ ಮಾಡಿಕೊಂಡಿದೆ.

ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಪಾಕಿಸ್ತಾನ ಹೇಗಾದ್ರೂ ಮಾಡಿ ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ಈ ಪ್ಲಾನ್​ ಹಾಕಿಕೊಂಡಿದ್ದು, ಹೊಸದಾಗಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಆಶಿಫ್​ ಅಲಿ, ವೇಗದ ಬೌಲರ್​ ಮೊಹಮ್ಮದ್​ ಅಮೀರ್​ ಹಾಗೂ ರಿಯಾಜ್​ಗೆ ಅವಕಾಶ ನೀಡಿದೆ. 2011 ಹಾಗೂ 2015ರ ವಿಶ್ವಕಪ್​​ನಲ್ಲಿ ರಿಯಾಜ್​ ಪಾಕ್​ ಪರ ಅದ್ಭುತ ಪ್ರದರ್ಶನ ನೀಡಿದ್ದರು.

ಈ ಹಿಂದೆ 15 ಸದಸ್ಯರ ತಂಡ ಪ್ರಕಟಗೊಳಿಸಿದ್ದ ಪಾಕ್​ ಕ್ರಿಕೆಟ್​ ಮಂಡಳಿ, ಮೊಹಮ್ಮದ್​ ಅಮೀರ್​​ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಆದರೆ ಬೌಲಿಂಗ್​ ವಿಭಾಗದಲ್ಲಿ ಅಷ್ಟೊಂದು ಅದ್ಭುತ ಪ್ರದರ್ಶನವನ್ನ ಇತರ ಆಟಗಾರರು ನೀಡದ ಕಾರಣ ಅಮೀರ್​ಗೆ ಅವಕಾಶ ನೀಡಿದೆ.

ಪಾಕ್​ ತಂಡ ಇಂತಿದೆ: ಸರ್ಫರಾಜ್​ ಅಹ್ಮದ್​(ಕ್ಯಾಪ್ಟನ್​), ಫಖರ್​ ಜಮಾನ್​, ಇಮಾಮ್​-ಉಲ್​-ಹಕ್​, ಬಾಬರ್​ ಅಜಂ, ಹಾರಿಸ್​ ಸೋಹಿಲ್​,ಮೊಹಮ್ಮದ್ ಹಫೀಜ್​,ಶೋಯೆಬ್​ ಮಲಿಕ್​,ಆಶಿಫ್​ ಅಲಿ, ಇಮಾದ್​ ವಾಸೀಂ, ಶಾಬಾದ್​ ಖಾನ್​,ಮೊಹಮ್ಮದ್ ಅಮೀರ್​,ಮೊಹಮ್ಮದ್​ ಹಸನೈನ್​, ಹಸನ್​ ಅಲಿ,ವಹಾಬ್​ ರಿಯಾಜ್​, ಶಾನ್​ ಅಫ್ರಿದಿ

ABOUT THE AUTHOR

...view details