ಇಸ್ಲಾಮಾಬಾದ್:ಒಂದೆಡೆ ಉಗ್ರರನ್ನು ಛೂ ಬಿಡುತ್ತಾ ಮತ್ತೊಂದೆಡೆ ಶಾಂತಿ ಮಾತುಕತೆ ಬಗ್ಗೆ ಮಾತನಾಡುವ ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ, ಮೋದಿ ಪುನರಾಯ್ಕೆಯಾದ ಬಳಿಕ ಇದೀಗ ಮತ್ತೆ ಮಾತುಕತೆ ವಿಚಾರ ಎತ್ತಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ಗೆ ಪತ್ರ ಬರೆದಿದ್ದು, ಉಭಯ ದೇಶಗಳ ಮಾತುಕತೆ ಆಯೋಜಿಸುವಂತೆ ಕೋರಿದ್ದಾರೆ.
ಸುಷ್ಮಾ ಹುದ್ದೆಗೆ ಬಂದ ಸಮರ್ಥ ಉತ್ತರಾಧಿಕಾರಿ... ಪಾಕ್ ವಿರುದ್ಧ ಗುಡುಗಿದ್ದ ಸುಬ್ರಹ್ಮಣ್ಯಂ ಜೈಶಂಕರ್ ಯಾರು..?
ಪಾಕ್ ವಿದೇಶಾಂಗ ಕಾರ್ಯದರ್ಶಿ ಸೋಹೈಲ್ ಮೊಹಮ್ಮದ್, ಈದ್ ಹಬ್ಬದ ವೇಳೆ ಭಾರತಕ್ಕೆ ಆಗಮಿಸಿದ್ದು ಇದೇ ಸಂದರ್ಭದಲ್ಲಿ ಪಾಕಿಸ್ತಾನದಿಂ ಮಾತುಕತೆಯ ಪತ್ರ ಬಂದಿದೆ. ಆದರೆ ಸೋಹೈಲ್ ಮೊಹಮ್ಮದ್ ಅವರದ್ದು ಕೇವಲ ವೈಯಕ್ತಿಕ ಬೇಟಿ, ಯಾವುದೇ ಮಾತುಕತೆ ನಡೆದಿಲ್ಲ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.
ಕಿರ್ಗಿಸ್ತಾನದ ಬಿಶೆಕ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಗಳ ಸಭೆಯಲ್ಲಿ ಭಾರತ ಹಾಗೂ ಪಾಕ್ ಪ್ರಧಾನಿಗಳ ನಡುವೆ ಯಾವುದೇ ಮಾತುಕತೆ ಆಯೋಜನೆಗೊಂಡಿಲ್ಲ ಎಂದು ದಿನದ ಹಿಂದೆ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿತ್ತು.