ಕರ್ನಾಟಕ

karnataka

ETV Bharat / briefs

ಭಾರತದ ಮನವಿಗೆ ಪಾಕ್​ ಸ್ಪಂದನೆ... ಮೋದಿಗಾಗಿ ವಾಯುಮಾರ್ಗ ತೆರವಿಗೆ ಒಪ್ಪಿಗೆ...!? - ಬಿಶ್ಕೆಕ್​

ಜೂನ್​ 13 - 14ರಂದು ಕಿರ್ಗಿಸ್ತಾನದ ಬಿಶ್ಕೆಕ್​ನಲ್ಲಿ ನಡೆಯಲಿರುವ ಶಾಂಘೈ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರಧಾನಿ ಮೋದಿ ಪಾಕ್​ ವಾಯುಮಾರ್ಗದ ಮೂಲಕ ಬಿಶ್ಕೆಕ್​ ತೆರಳಬೇಕು. ಹೀಗಾಗಿ ವಾಯುಮಾರ್ಗದ ತೆರವಿಗೆ ಭಾರತ ಮನವಿ ಮಾಡಿಕೊಂಡಿತ್ತು.

ಮೋದಿ

By

Published : Jun 11, 2019, 10:10 AM IST

ಲಾಹೋರ್:ಬಾಲಕೋಟ್ ಮೇಲಿನ ವಾಯುದಾಳಿಯ ಬಳಿಕ ವಾಯುಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದ ಪಾಕಿಸ್ತಾನ ಇದೀಗ ಮೋದಿಗಾಗಿ ತೆರವು ಮಾಡಲು ಮುಂದಾಗಿದೆ.

ಜೂನ್​ 13-14ರಂದು ಕಿರ್ಗಿಸ್ತಾನದ ಬಿಶ್ಕೆಕ್​ನಲ್ಲಿ ನಡೆಯಲಿರುವ ಶಾಂಘೈ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರಧಾನಿ ಮೋದಿ ಪಾಕ್​ ವಾಯುಮಾರ್ಗದ ಮೂಲಕ ಬಿಶ್ಕೆಕ್​ ತೆರಳಬೇಕು. ಹೀಗಾಗಿ ವಾಯುಮಾರ್ಗದ ತೆರವಿಗೆ ಭಾರತ ಮನವಿ ಮಾಡಿಕೊಂಡಿತ್ತು.

ಸದ್ಯ ಭಾರತದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪಾಕಿಸ್ತಾನ ಮೋದಿ ಪಾಕಿಸ್ತಾನ ಮೂಲಕವಾಗಿ ತೆರಳಬಹುದು ಎಂದಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪಾಕಿಸ್ತಾನದಿಂದ ಒಪ್ಪಿಗೆ ನೀಡಿದ ಅಧಿಕೃತ ಮಾಹಿತಿ ಬರಬೇಕಿದೆಯಷ್ಟೇ

ABOUT THE AUTHOR

...view details