ಕರ್ನಾಟಕ

karnataka

ETV Bharat / briefs

ಸಂಬಳ ನೀಡದೆ  ಗಾರ್ಮೆಂಟ್​ ಮುಚ್ಚಿದ ಮಾಲೀಕ.. ಸಂಕಷ್ಟದಲ್ಲಿ ಉದ್ಯೋಗಿಗಳು - ದೊಡ್ಡಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿ ಒಂದೊಂದೇ ಗಾರ್ಮೆಂಟ್ಸ್ ಬಾಗಿಲು ಮುಚ್ಚುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್.

ಉದ್ಯೋಗಿ

By

Published : Apr 26, 2019, 1:37 AM IST

Updated : Apr 26, 2019, 8:42 AM IST

ದೊಡ್ಡಬಳ್ಳಾಪುರ: 14 ತಿಂಗಳ ಪಿಎಫ್ ಹಣ ಮತ್ತು ಎರಡು ತಿಂಗಳ ಸಂಬಳಕ್ಕಾಗಿ ಪೊಲೀಸ್​ ಠಾಣೆ​​ಗೆ ಅಲೆಯಬೇಕಾದ ಪರಿಸ್ಥಿತಿ ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್ ಸಿಬ್ಬಂದಿಗಳಿಗೆ ಎದುರಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿ ಒಂದೊಂದೇ ಗಾರ್ಮೆಂಟ್ಸ್ ಬಾಗಿಲು ಮುಚ್ಚುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್.

ಸುಮಾರು 2500 ಉದ್ಯೋಗಿಗಳು ಸ್ಕಾಟ್ಸ್ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು. ಕಾರ್ಮಿಕರಿಗೆ ಸಂಬಳ ಕೊಡಲಾಗದ ಕಳೆದ 8 ತಿಂಗಳಿಂದ ಬಾಗಿಲು ಹಾಕಿದೆ. ಪರಿಣಾಮ 2500 ಹೆಚ್ಚು ಕಾರ್ಮಿಕರು ಬೀದಿಗೆ ಬಂದಿದ್ದಾರೆ.

ದೊಡ್ಡಬಳ್ಳಾಪುರದ ಅಪೆರಲ್ಸ್ ಪಾರ್ಕ್ ನಲ್ಲಿರುವ ಸ್ಕಾಟ್ಸ್ ಗಾರ್ಮೆಂಟ್ಸ್ ಗೆ ದೂರದ ಗೌರಿಬಿದನೂರು, ಕೊರಟಗೆರೆ, ಚಿಕ್ಕಬಳ್ಳಾಪುರ ದಿಂದ ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಸ್ಕಾಟ್ಸ್ ಗಾರ್ಮೆಂಟ್ಸ್ ಮಾಲೀಕರು ಕಾರ್ಮಿಕರಿಗೆ ಎರಡು ತಿಂಗಳ ಸಂಬಳ ನೀಡದೇ ಬಾಗಿಲು ಹಾಕಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಉದ್ಯೋಗಿಗಳು

ಐದು ವರ್ಷಗಳಿಂದ ಇದೇ ಗಾರ್ಮೆಂಟ್ಸ್ ನಲ್ಲಿ ದುಡಿದು ಜೀವನ ನಡೆಸುತ್ತಿದ್ದವರು ಸದ್ಯ ಬೀದಿಗೆ ಬಂದಿದ್ದಾರೆ. ಕಳೆದ ಎಂಟು ತಿಂಗಳಿಂದ ಪಿಎಫ್ ಮತ್ತು ಬಾಕಿ ಇರುವ ಸಂಬಳಕ್ಕಾಗಿ ಗಾರ್ಮೆಂಟ್ಸ್​​ಗೆ ಅಲೆಯುತ್ತಿದ್ದಾರೆ. ಆದರೆ ಗಾರ್ಮೆಂಟ್ಸ್ ಮಾಲೀಕ ಮಾತ್ರ ಕೈಗೆ ಸಿಕ್ಕಲ್ಲ. ಸುಮಾರು 2500 ಹೆಚ್ಚು ಕಾರ್ಮಿಕರಿಗೆ ಎರಡು ತಿಂಗಳು ಸಂಬಳ ಮತ್ತು ಪಿಎಫ್ ಹಣ ಕೊಡಬೇಕಾದ ಮಾಲೀಕ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಿದರು ಗಾರ್ಮೆಂಟ್ಸ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಎಲ್ಲಾ ಆಸರೆಗಳನ್ನು ಕಳೆದುಕೊಂಡಿರುವ ಕಾರ್ಮಿಕರು ಈಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಯಲ್ಲಿ ದೂರು ನೀಡಿ ಹಣ ಕೊಡಿಸುವಂತೆ ಮನವಿ ಮಾಡಿದ್ದಾರೆ.

Last Updated : Apr 26, 2019, 8:42 AM IST

ABOUT THE AUTHOR

...view details