ಕರ್ನಾಟಕ

karnataka

ETV Bharat / briefs

ಟ್ವಿಟ್ಟರ್​​ನಲ್ಲಿ ಲೋಕಸಮರದ್ದೇ ಚರ್ಚೆ... ಇಲ್ಲೂ ಮೋದಿಯದ್ದೇ ಹವಾ!

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಗುರುವಾರದ ಅಂತ್ಯದವರೆಗೆ 25.6 ಮಿಲಿಯನ್​ ಟ್ವೀಟ್​ಗಳು ಲೋಕಸಭಾ ಚುನಾವಣೆ ಕುರಿತಾಗಿ ನಡೆದಿವೆ. ಆದ್ರೆ ನಿನ್ನೆ ಒಂದೇ ದಿನ 1.2 ಮಿಲಿಯನ್ ಟ್ವೀಟ್​​ಗಳು ದಾಖಲಾಗಿವೆ.

By

Published : Apr 12, 2019, 9:32 AM IST

ಟ್ವಿಟರ್

ನವದೆಹಲಿ:ಲೋಕಸಮರದ ಮೊದಲ ಹಂತದ ಚುನಾವಣೆಗೆ ತೆರೆ ಬಿದ್ದಿದೆ. ಒಂದಷ್ಟು ಗೊಂದಲ, ಗಲಭೆಗಳ ನಡುವೆ ದೇಶದ 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತದಾನ ಪೂರ್ಣವಾಗಿದೆ.

ಒಂದೆಡೆ ಮತದಾನ ನಡೆಯುತ್ತಿದ್ದರೆ ಅತ್ತ ಟ್ವಿಟ್ಟರ್​​ನಲ್ಲಿ ಇದೇ ವಿಚಾರ ಸಾಕಷ್ಟು ಚರ್ಚೆಯಾಗುತ್ತಿತ್ತು. ಪ್ರಮುಖ ಘಟನಾವಳಿಗಳಿಗೆ ಅತ್ಯಂತ ವೇಗವಾಗಿ ಸ್ಪಂದಿಸುವ ಟ್ವಿಟ್ಟರ್​ನಲ್ಲಿ ಗುರುವಾರ ಲೋಕಸಮರದ್ದೇ ಸುದ್ದಿ ಹರಿದಾಡುತ್ತಿತ್ತು.

ಗುರುವಾರ ಒಟ್ಟಾರೆ 45.6 ಮಿಲಿಯನ್​ ಟ್ವೀಟ್​​ಗಳು ದಾಖಲಾಗಿದ್ದರೆ ಅದರಲ್ಲಿ 1.2 ಮಿಲಿಯನ್​ ಟ್ವೀಟ್​​ಗಳು ಲೋಕಸಭಾ ಚುನಾವಣೆಯ ಕುರಿತಾಗಿತ್ತು.

ಮುಂಚೂಣಿಯಲ್ಲಿ ಮೋದಿ:

ಲೋಕಸಭಾ ಚುನಾವಣೆಯ ವಿಚಾರವನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಳ್ಳುವ ವೇಳೆ ಪ್ರಧಾನಿ ಮೋದಿ ಹೆಸರು ಅತಿ ಹೆಚ್ಚು ಬಾರಿ ಉಲ್ಲೇಖಗೊಂಡಿದೆ ಎಂದು ಸಂಸ್ಥೆ ಹೇಳಿದೆ.

ಮೋದಿಯ ಹೊರತಾಗಿ ಅಮಿತ್ ಶಾ, ಯೋಗಿ ಆದಿತ್ಯನಾಥ್​, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರುಗಳು ನಂತರದ ಸ್ಥಾನಗಳಲ್ಲಿವೆ.

ABOUT THE AUTHOR

...view details