ಚಿಕ್ಕಮಗಳೂರು:ಜಿಲ್ಲೆಯ ಸಾರಿಗೆ ಇಲಾಖೆಯಲ್ಲಿ ಈ ಹಿಂದೆ ಎಲ್ಎಲ್ಆರ್ ಅಥವಾ ಡಿಎಲ್ ಪಡೆಯಲು ಹರಸಾಹಸ ಪಡಬೇಕಾಗಿತ್ತು. ಆದರೀಗ ಸಾರ್ವಜನಿಕರು ಕಚೇರಿಗಳಿಗೆ ತಪ್ಪಿಸಲು ಮತ್ತು ದಲ್ಲಾಳಿಗಳ ಕಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಆನ್ಲೈನ್ ವ್ಯವಸ್ಥೆ ಜಾರಿಗೆ ತಂದಿದೆ.
ಪರವಾನಗಿ ಪಡೆಯಲು ಆನ್ಲೈನ್ ಸೇವೆ: ಬೀಳಲಿದೆ ದಲ್ಲಾಳಿಗಳಿಗೆ ಕಡಿವಾಣ
ಪರವಾನಗಿ ಪಡೆಯಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ ಜನರು ಬಹಳ ತೊಂದರೆ ಅನುಭವಿಸಬೇಕಿತ್ತು. ಈಗ ಸರ್ಕಾರ ಆನ್ಲೈನ್ ಸೇವೆ ಪ್ರಾರಂಭಿಸಿರುವ ಕಾರಣ ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.
ಹೀಗಾಗಿ, ಆನ್ಲೈನ್ನಲ್ಲಿಯೇ ಡಿಎಲ್ ಹಾಗೂ ಎಲ್ಎಲ್ಗೆ ಅರ್ಜಿ ಸಲ್ಲಿಸಿ ತಮ್ಮ ಕಾರ್ಯಗಳನ್ನು ವೇಗವಾಗಿ ಪಡೆದುಕೊಳ್ಳಬಹುದು. ಈ ಕುರಿತು ಆರ್ಟಿಒ ಅಧಿಕಾರಿ ಮುರುಗೇಂದ್ರ ಶಿರೋಲ್ಕರ್ ಮಾತನಾಡಿ, ಈ ಆನ್ಲೈನ್ನಲ್ಲಿಯೇ ಸೇವೆ ಪ್ರಾರಂಭಿಸಿದ ಕಾರಣ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿದರೆ ಮಧ್ಯವರ್ತಿಗಳಿಗೆ ಕಡಿವಾಣ ಬೀಳಲಿದೆ. ಕೆಲಸ ಕೂಡ ಬೇಗ ಮುಗಿಯಲಿದೆ. ಹಾಗೆಯೇ ಜನರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಚಾಲನಾ ಪರವಾನಗಿ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗಿತ್ತು. ಈ ಹಿಂದೆ ಬ್ರೋಕರ್ಗಳ ಹಾವಳಿ ಇತ್ತು. ಆನ್ಲೈನ್ ಬಂದ ಬಳಿಕ ಅದೆಕ್ಕೆಲ್ಲ ಕಡಿವಾಣ ಬೀಳಲಿದೆ. ಸರ್ಕಾರ ನಿಗದಿಪಡಿಸಿದ ಹಣ ಮಾತ್ರ ಪಾವತಿಸಬೇಕು. ಇದು ಸಾರ್ವಜನಿಕರಿಗೆ ತುಂಬಾ ಉಪಯೋಗವಾಗುತ್ತಿದೆ ಎಂದು ಹೇಳಿದರು.