ಕರ್ನಾಟಕ

karnataka

ETV Bharat / briefs

ಶತಕ ಸಿಡಿಸಿದ ರಾಹುಲ್​ರನ್ನ ಕೈ ಬಿಟ್ಟು, ಈ ಆಟಗಾರನನ್ನ 4ನೇ ಕ್ರಮಾಂಕಕ್ಕೆ ಸೂಕ್ತ ಎಂದ ಮಂಜ್ರೇಕರ್​

ಭಾರತ ತಂಡವನ್ನು ಪ್ರತಿನಿಧಿಸಿ ಇದೀಗ ಕಾಮೆಂಟೇಟರ್​ ಆಗಿರುವ ಸಂಜಯ್​ ಮಂಜ್ರೇಕರ್​ ಶತಕ ಸಿಡಿಸಿದ ರಾಹುಲ್​ಗಿಂತ ತಮಿಳುನಾಡಿನ ಆಲ್​ರೌಂಡರ್​ ವಿಜಯ್​ ಶಂಕರ್​ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದು, ಎಂಎಸ್​ಕೆ ಪ್ರಸಾದ್​ ಅವರ ಆಯ್ಕೆಯನ್ನು ಎತ್ತಿ ಹಿಡಿದಿದ್ದಾರೆ.

kl

By

Published : May 29, 2019, 5:48 PM IST

ಮುಂಬೈ: ಬಾಂಗ್ಲಾದೇಶದ ವಿರುದ್ಧ ಶತಕಗಳಿಸಿದ ರಾಹುಲ್​ ತಾವು ಯಾವುದೇ ಕ್ರಮಾಂಕದಲ್ಲಾದರೂ ಆಡಲು ಸಿದ್ದ ಎಂದು ಬ್ಯಾಟಿಂಗ್​​​ ಮೂಲಕ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟರೂ ಭಾರತದ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ ರಾಹುಲ್​ಗಿಂತ ವಿಜಯ್​ ಶಂಕರ್​ 4 ಕ್ರಮಾಂಕಕ್ಕೆ ಸೂಕ್ತ ಎಂದು ಹೇಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ಭಾರತ ತಂಡವನ್ನು ಪ್ರತಿನಿಧಿಸಿ ಇದೀಗ ಕಾಮೆಂಟೇಟರ್​ ಆಗಿರುವ ಸಂಜಯ್​ ಮಂಜ್ರೇಕರ್​ ಶತಕ ಸಿಡಿಸಿದ ರಾಹುಲ್​ಗಿಂತ ತಮಿಳುನಾಡಿನ ಆಲ್​ರೌಂಡರ್​ ವಿಜಯ್​ ಶಂಕರ್​ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದು, ಎಂಎಸ್​ಕೆ ಪ್ರಸಾದ್​ ಅವರ ಆಯ್ಕೆಯನ್ನು ಎತ್ತಿ ಹಿಡಿದಿದ್ದಾರೆ.

ವಿಜಯ್​ ಶಂಕರ್​ಗೆ ವಿಶ್ವಕಪ್​ ತಂಡದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇದನ್ನು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ತಂಡದ ಆಯ್ಕೆ ದಿನವೇ ಸಮಾಜಾಯಿಷಿ ನೀಡಿದ್ದಾರೆ. ಹಾಗಾಗಿ ವಿಜಯ್​ಗೆ ಅವರ ಸಾಮರ್ಥ್ಯ ತೋರಿಸಲು ಅವಕಾಶ ಕೊಡಬೇಕು ಎಂದು ತಿಳಿಸಿದ್ದಾರೆ.

ಕೇವಲ ಒಂದು ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲವೆಂದು ವಿಜಯ್​ ಸ್ಥಾನದಲ್ಲಿ ರಾಹುಲ್​ ಹೆಸರು 4 ನೇ ಕ್ರಮಾಂಕಕ್ಕೆ ಕೇಳಿಬರುತ್ತಿದೆಯಷ್ಟೇ ಎಂದು ಮಂಜ್ರೇಕರ್​ ರಾಹುಲ್​ ಆಯ್ಕೆಯ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಆದರೆ, ಭಾರತ ತಂಡ ಪಂದ್ಯ ಗೆದ್ದ ನಂತರ 4 ನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಅವರೇ ಟ್ವೀಟ್​ ಮಾಡಿದ್ದು, ಇದು ಮತ್ತೆ ವಿಜಯ್​ ಪರ ಬ್ಯಾಟ್​ ಬೀಸಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ರಾಹುಲ್​ ನಿನ್ನೆಯ ಪಂದ್ಯದಲ್ಲಿ 99 ಎಸೆತಗಳಲ್ಲಿ 102 ರನ್​ಗಳಿಸಿದ್ದರು. ಕೊಹ್ಲಿ ಸಹ ರಾಹುಲ್​ 4ನೇ ಕ್ರಮಾಂಕದಲ್ಲಿ ಶತಕ ಸಿಡಿಸಿರುವುದರಿಂದ ತಂಡಕ್ಕೆ ಆನೆಬಲ ಬಂದಂತಾಗಿದೆ ಎಂದಿದ್ದರು. ಒಟ್ಟಾರೆ ರಾಹುಲ್​ರನ್ನು ಆರಂಭಿಕ ಸ್ಥಾನಕ್ಕೆ ಬ್ಯಾಕ್​ಆಪ್​ ಪ್ಲೇಯರ್​ ಆಗಿ ಸೀಮಿತಗೊಳಿಸುತ್ತಾರಾ ಅಥವಾ ನಾಲ್ಕನೆ ಕ್ರಮಾಂಕದಲ್ಲಿ ಆಡಿಸಲಾಗುತ್ತದೆಯೇ ಎಂದು ಜೂನ್​ 5ರಂದು ತಿಳಿಯಲಿದೆ.

ABOUT THE AUTHOR

...view details