ಕರ್ನಾಟಕ

karnataka

ETV Bharat / briefs

ಹಿಮಾಲಯದಲ್ಲಿ ಯಾವ ಯತಿಯೂ ಇಲ್ಲ.. ಅವು ಕರಡಿ ಹೆಜ್ಜೆ ಗುರುತು: ನೇಪಾಳ ಸೇನೆ - ಹಿಮ ಮಾನವ

ಹಿಮಮಾವನವ 'ಯತಿ'ಯದ್ದು ಎನ್ನಲಾದ ಪಾದದ ಗುರುತನ್ನು ಇಂಡಿಯನ್ ಆರ್ಮಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಇದಕ್ಕೆ ನೇಪಾಳ ಸೇನೆ ಅಪಸ್ವರ ಎತ್ತಿದೆ.

ಯತಿ ಹೆಜ್ಜೆ ಗುರುತು

By

Published : May 2, 2019, 4:20 PM IST

ಕಠ್ಮಂಡು:ಹಿಮಾಲಯದಲ್ಲಿ ಪತ್ತೆಯಾಗಿದ್ದ ಬೃಹದಾಕಾರದ ಹೆಜ್ಜೆಗುರುತಿನ ಹಿಂದೆ ಹಿಮ ಮಾನವ ಇದ್ದಾನೆ ಎಂಬೆಲ್ಲಾ ಊಹಾಪೋಹಗಳಿಗೆ ನೇಪಾಳ ಸೇನೆ ಅಪಸ್ವರ ಎತ್ತಿದ್ದು, ಭಾರತೀಯ ಸೇನೆ ಪ್ರಕಟಿಸಿದ ಫೋಟೊದಲ್ಲಿರುವುದು ಬಹುಶಃ ಹಿಮ ಕರಡಿಯ ಹೆಜ್ಜೆ ಗುರುತು ಎಂದು ಹೇಳಿದೆ.

ಹಿಮಾಲಯದ ಮಕಾಲು ಬೇಸ್​ ಕ್ಯಾಂಪ್​ ಬಳಿ ಪತ್ತೆಯಾಗಿದ್ದ ಬೃಹದಾಕಾರದ ಹೆಜ್ಜೆ ಗುರುತುಗಳನ್ನು ಗುರುತಿಸಿದ್ದ ಭಾರತೀಯ ಸೇನೆಯ ಪರ್ವತಾರೋಹಣ ತಂಡವು ಇದು ಹಿಮ ಮಾನವ ಅಥವಾ ಯತಿಯ ಹೆಜ್ಜೆ ಗುರುತು. ಈ ಕುರಿತು ಒಂದು ಸಂಶೋಧನೆ ನಡೆಯಬೇಕೆಂದು ಒತ್ತಾಯಿಸಿತ್ತು.

ಯತಿ ಹೆಜ್ಜೆ ಗುರುತು

ಹಿಮಮಾನವ ಮತ್ತೆ ಪ್ರತ್ಯಕ್ಷ...? ಪಾದದ ಗುರುತಿನಿಂದ ಹೆಚ್ಚಾದ ಕುತೂಹಲ

ಈ ವಿಷಯ ಪ್ರಕಟವಾದ ಬೆನ್ನಿಗೇ ನೇಪಾಳ ಸೇನೆಯು ಭಾರತೀಯ ಸೇನೆಯ ಹೇಳಿಕೆಯನ್ನು ಅಲ್ಲಗೆಳೆದಿದ್ದು, ಬಹುಶಃ ಇದು ಹಿಮ ಕರಡಿಯ ಹೆಜ್ಜೆಗುರುತು ಭಾರತೀಯ ಸೇನೆಯು ಮೇಲ್ನೋಟಕ್ಕೆ ಕಾಣುವ ದೈಹಿಕ ಸಾಕ್ಷಗಳನ್ನಷ್ಟೇ ಕಲೆ ಹಾಕಿದೆ. ಯತಿ ಇದ್ದಾನೆ ಎಂಬುದಕ್ಕೆ ನಿಖರ ಸಾಕ್ಷ್ಯಗಳಿಲ್ಲ ಎಂದು ಹೇಳಿದೆ.

ಮಕಾಲು ಬೇಸ್​ ಕ್ಯಾಂಪ್​ ಬಳಿ ಕರಡಿಗಳು ಆಗಾಗ್ಗೆ ಓಡಾಡುತ್ತಿರುತ್ತವೆ, ಇವುಗಳ ಹೆಜ್ಜೆ ಗುರುತನ್ನೇ ಭಾರತೀಯ ಸೇನೆ ತಪ್ಪಾಗಿ ಗ್ರಹಿಸಿರಬಹುದು ಎಂದು ನೇಪಾಳ ಸೇನೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details