ನವದೆಹಲಿ:ಐಸಿಸ್ ಉಗ್ರ ಸಂಘಟನೆಯದ್ದು ಎನ್ನಲಾದ ಬರಹಗಳು ನವೀ ಮುಂಬೈನ ಉರನ್ ಪ್ರದೇಶದಲ್ಲಿ ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.
ರಾಯ್ಗಢ್ ಜಿಲ್ಲೆಯ ಉರನ್ ಪ್ರದೇಶದ ಖೋಪ್ಟೆ ಸೇತುವೆಯ ಪಿಲ್ಲರ್ನಲ್ಲಿ ಐಸಿಸ್ ವಿರುದ್ಧ ಭಾರತೀಯ ಸೇನೆ ಹೋರಾಡುವ ಚಿತ್ರ ಬಿಡಿಸಲಾಗಿದೆ. ಜೊತೆಗೆ ಉಗ್ರ ಹಫೀಜ್ ಸಯೀದ್ ಹೆಸರೂ ಇಲ್ಲಿ ಉಲ್ಲೇಖವಾಗಿದ್ದು, ರಾಕೆಟ್ ಚಿತ್ರಗಳನ್ನೂ ಇಲ್ಲಿ ಚಿತ್ರಿಸಲಾಗಿದೆ.
ಐಸಿಸ್ಗೆ ಸೇರಿದ್ದು ಎನ್ನಲಾದ ಬರಹ "ಪಿಲ್ಲರ್ನಲ್ಲಿ ಗೀಚಲಾಗಿರುವ ಬರಹದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಟೀಂ ಇಂಡಿಯಾ ಹಿರಿಯ ಆಟಗಾರ ಎಂ ಎಸ್ ಧೋನಿ ಹಾಗೂ ಐಸಿಸ್ ಮುಖ್ಯಸ್ಥ ಅಬುಬಕರ್ ಅಲ್ ಬಗ್ದಾದಿ ಹೆಸರುಗಳಿವೆ" ಎಂದು ನವೀ ಮುಂಬೈನ ಪೊಲೀಸ್ ಕಮೀಷನರ್ ಸಂಜಯ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಐಸಿಸ್ಗೆ ಸೇರಿದ್ದು ಎನ್ನಲಾದ ಬರಹ "ಸ್ಥಳದಲ್ಲಿ ಪತ್ತೆಯಾದ ಬಿಯರ್ ಬಾಟಲ್, ಗ್ಲಾಸ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯರ ಪ್ರಕಾರ ಈ ಜಾಗದಲ್ಲಿ ಒಂದಷ್ಟು ಯುವಕರು ಪ್ರತಿನಿತ್ಯ ಇಲ್ಲಿ ಮದ್ಯ ಸೇವಿಸುತ್ತಾರೆ" ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.