ಕರ್ನಾಟಕ

karnataka

ETV Bharat / briefs

'ದೇವರ' ಅಪ್ಪುಗೆಗೆ ಕಾತರಿಸುತ್ತಿರುವ ಪಾಕ್‌ ಕ್ರಿಕೆಟರ್‌.. ಅಬಿದ್​ ಅಲಿಗೆ ದರ್ಶನ ಕೊಡುವರೇ ಸಚಿನ್? - ameer

ಪಾಕಿಸ್ತಾನ ತಂಡಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಪದಾರ್ಪಣೆ ಮಾಡಿದ್ದ ಅಬಿದ್​ ಅಲಿ ಮುಂಬರುವ ವಿಶ್ವಕಪ್​ ವೇಳೆ ಭಾರತದ ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೂಲ್ಕರ್‌ರನ್ನು ಒಮ್ಮೆ ಭೇಟಿಯಾಗಿ, ಅವರಿಂದ ಬ್ಯಾಟಿಂಗ್​ ಟಿಪ್ಸ್​ ಪಡೆಯಬೇಕೆಂಬ ಆಕಾಂಕ್ಷೆ ಹೊಂದಿರುವುದಾಗಿ ಅಲಿ ಹೇಳಿಕೊಂಡಿದ್ದಾರೆ.

abid ali

By

Published : Apr 21, 2019, 9:29 PM IST

ಲಾಹೋರ್​: ಪಾಕಿಸ್ತಾನದ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿರುವ ಆರಂಭಿಕ ಆಟಗಾರ ಅಬಿದ್​ ಅಲಿಗೆ ಬ್ಯಾಟಿಂಗ್​ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ಅವರನ್ನು ಭೇಟಿ ಮಾಡಿ ಒಂದು ಬಾರಿ ಅಪ್ಪಿಕೊಳ್ಳಬೇಕೆಂಬ ಆಸೆ ಇದೆಯಂತೆ.

ಮೂರು ದಿನಗಳ ಹಿಂದೆಯಷ್ಟೇ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ವಿಶ್ವಕಪ್​ ತಂಡಕ್ಕೆ ಗೋಷಿಸಿದ್ದ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರುವ ಅಬಿದ್​ಗೆ ಸಚಿನ್​ ರೋಲ್​ ಮಾಡೆಲ್​ ಆಗಿದ್ದಾರಂತೆ. ಇದೇ ಕಾರಣದಿಂದ ಜೀವನದಲ್ಲಿ ಒಂದು ಬಾರಿಯಾದರೂ ಸಚಿನ್​ರನ್ನು ಭೇಟಿ ಮಾಡಬೇಕೆಂಬ ಕನಸಿದ್ದು, ಅದು ಸದ್ಯದಲ್ಲೇ ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಸಾಧ್ಯವಾಗಲಿದೆ ಎಂದು ಭಾವಿಸಿದ್ದೇನೆ ಅಂತಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸಚಿನ್​ ತೆಂಡೂಲ್ಕರ್

ನಾನು ಕೆರಿಯರ್​ ಶುರು ಮಾಡಿದಾಗಿನಿಂದಲೂ ಸಚಿನ್​ರ ಆಟವನ್ನು ನೋಡಿಕೊಂಡು ಅವರ ಬ್ಯಾಟಿಂಗ್​ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದೇನೆ. ಅವರೊಬ್ಬ ವಿಶ್ವಶ್ರೇಷ್ಠ ಆಟಗಾರನಾಗಿದ್ದು , ನಾನೂ ಕೂಡ ಅವರಂತಾಗಬೇಕೆಂದು ಕೊಂಡಿದ್ದೇನೆ. ಅವರನ್ನು ನಾನು ಭೇಟಿ ಮಾಡಲು ನನಗೆ ಖಂಡಿತಾ ಅವಕಾಶ ಮಾಡಿಕೊಡುತ್ತಾರೆಂಬ ವಿಶ್ವಾಸವಿದೆ. ಹಾಗೊಮ್ಮೆ ಅವಕಾಶ ದೊರೆತರೆ ಅವರನ್ನು ಒಮ್ಮೆ ಅಪ್ಪಿಕೊಳ್ಳುತ್ತೇನೆ, ಅವರಿಂದ ಬ್ಯಾಟಿಂಗ್​ ಟಿಪ್ಸ್​ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಎರಡು ದೇಶಗಳ ರಾಜಕೀಯ ಸ್ಥಿತಿ ಸರಿಯಿಲ್ಲದಿರುವುದನ್ನು ಬಿಟ್ಟರೆ, ಆಟ ಎಂದು ಬಂದಾಗ ಎರಡೂ ತಂಡದ ಪ್ಲೇಯರ್​ಗಳು ಬಹಳ ಎಂಜಾಯ್​ ಮಾಡುತ್ತಾರೆ. ಕಳೆದ ಟಿ-20 ವಿಶ್ವಕಪ್​ ವೇಳೆ ಭಾರತ ತಂಡದ ವಿರಾಟ್​ ಕೊಹ್ಲಿ ತಮ್ಮ ಬ್ಯಾಟನ್ನು ನಮ್ಮ ತಂಡದ ಬೌಲರ್​ ಮೊಹಮ್ಮದ್​ ಅಮೀರ್​ಗೆ ನೀಡಿದ್ದು ಅವರ ದೊಡ್ಡಗುಣ ಎಂದು ಕೊಹ್ಲಿಯನ್ನ ಗುಣಗಾನ ಮಾಡಿದರು.

ABOUT THE AUTHOR

...view details