ಕರ್ನಾಟಕ

karnataka

ಏನ್ರೀ ಡಾಕ್ಟರೇ.. ಹಿಂಗಾ ಮಾಡೋದು!! ಆನ್​ಲೈನ್​ ಸಮಾಲೋಚನೆಗೆ ₹50 ಸಾವಿರ ಪೀಕುತ್ತಾನೆ ಈ ವೈದ್ಯ.. ವಾಟ್ಸ್​ಆ್ಯಪ್​ ಚಾಟ್​ ವೈರಲ್​

By

Published : May 5, 2021, 8:25 PM IST

ಡಾ. ಅಹ್ಲುವಾಲಿಯಾ ವಿಡಿಯೋ ಸಮಾಲೋಚನೆ ಮತ್ತು ವಾಟ್ಸ್ಆ್ಯಪ್ ಸಂದೇಶಗಳಿಗಾಗಿ 500 ರಿಂದ 50 ಸಾವಿರ ಶುಲ್ಕ ವಿಧಿಸುತ್ತಾರಂತೆ. ಸುದ್ದಿ ತಿಳಿದ ಆಸ್ಪತ್ರೆಯ ಆಡಳಿತ ಡಾ. ವಿಕಾಸ್ ಅಹ್ಲುವಾಲಿಯಾ ಅವರನ್ನು ಆಸ್ಪತ್ರೆಯಿಂದ ವಜಾಗೊಳಿಸಿದೆ..

delhi
delhi

ನವದೆಹಲಿ : ಕೋವಿಡ್​ ಪರಿಸ್ಥಿತಿಯಿಂದಾಗಿ ಪ್ರಸ್ತುತ ಜನರು ಆಸ್ಪತ್ರೆಗೆ ಹೋಗುವ ಬದಲು ವೈದ್ಯರಿಗೆ ಕರೆಗಳು ಮತ್ತು ವಿಡಿಯೋ ಕರೆಗಳ ಮೂಲಕ ಸಮಾಲೋಚನೆ ನಡೆಸುತ್ತಿದ್ದಾರೆ. ವೈದ್ಯರು ಸಹಾ ಕೊರೊನಾಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಆನ್‌ಲೈನ್ ಮೂಲಕ ತಮ್ಮ ರೋಗಿಗಳಿಗೆ ನೀಡುತ್ತಿದ್ದಾರೆ.

ಆದರೆ, ಈ ನಡುವೆ, ವಾಟ್ಸ್​ಆ್ಯಪ್ ಚಾಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ದೆಹಲಿಯ ಸಾಕೆತ್ ಮ್ಯಾಕ್ಸ್‌ ಆಸ್ಪತ್ರೆಯ ಡಾ. ವಿಕಾಸ್ ಅಹ್ಲುವಾಲಿಯಾ ಅವರು ವಿಡಿಯೋ ಸಮಾಲೋಚನೆ ಮತ್ತು ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಕೊರೊನಾಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ನೀಡಲು 50,000 ಶುಲ್ಕವನ್ನು ಪಡೆಯುತ್ತಿದ್ದಾರಂತೆ.

ಈ ವೈರಲ್​ ಚಾಟ್​ ಕುರಿತು ದೆಹಲಿ ಸಾಕೆಟ್ ಮ್ಯಾಕ್ಸ್ ಆಸ್ಪತ್ರೆಯ ಆಡಳಿತದೊಂದಿಗೆ ಮಾತನಾಡಿದಾಗ, ಆಸ್ಪತ್ರೆಯ ವಕ್ತಾರರು ತಮಗೂ ಈ ಮಾಹಿತಿ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯಿತು ಎಂದು ತಿಳಿಸಿದರು.

ಡಾ. ಅಹ್ಲುವಾಲಿಯಾ ವಿಡಿಯೋ ಸಮಾಲೋಚನೆ ಮತ್ತು ವಾಟ್ಸ್ಆ್ಯಪ್ ಸಂದೇಶಗಳಿಗಾಗಿ 500 ರಿಂದ 50 ಸಾವಿರ ಶುಲ್ಕ ವಿಧಿಸುತ್ತಾರಂತೆ. ಸುದ್ದಿ ತಿಳಿದ ಆಸ್ಪತ್ರೆಯ ಆಡಳಿತ ಡಾ. ವಿಕಾಸ್ ಅಹ್ಲುವಾಲಿಯಾ ಅವರನ್ನು ಆಸ್ಪತ್ರೆಯಿಂದ ವಜಾಗೊಳಿಸಿದೆ.

ABOUT THE AUTHOR

...view details