ಕರ್ನಾಟಕ

karnataka

ETV Bharat / briefs

ವಿಶ್ವಕಪ್​ ಸೆಲೆಕ್ಷನ್​ಗೋಸ್ಕರ ಶುಬ್ಮನ್​ ಗಿಲ್​ರನ್ನು 7ನೇ ಕ್ರಮಾಂಕಕ್ಕೆ ತಳ್ಳಿದರೆ ಕಾರ್ತಿಕ್​!

ವಿಶ್ವಕಪ್​ ಸೆಲೆಕ್ಷನ್​ ಹಿಂದಿನ ದಿನ ನಡೆದು ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ಶುಬ್ಮನ್​ ಗಿಲ್​ಗಿಂತ ಮೊದಲು ಕಾರ್ತಿಕ್​ ಬ್ಯಾಟಿಂಗ್​ಗೆ ಬಂದಿದ್ದನ್ನು ಮನೋಜ್​ ತಿವಾರಿ ತೀವ್ರವಾಗಿ ಖಂಡಿಸಿದ್ದಾರೆ.

ಗಿಲ್​

By

Published : Apr 16, 2019, 8:36 PM IST

ಕೋಲ್ಕತ್ತಾ: ಡೆಲ್ಲಿ ಕ್ಯಾಪಿಟಲ್​ ವಿರುದ್ಧ ಆರಂಭಿಕನಾಗಿ 65 ರನ್​ಗಳಿಸಿದ್ದ ಶುಬ್ಮನ್​ ಗಿಲ್​ ನಂತರದ ಪಂದ್ಯದಲ್ಲಿ ಮತ್ತೆ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿಸಿದ ಕಾರ್ತಿಕ್​ ನಡೆಯನ್ನು ಮನೋಜ್​ ತಿವಾರಿ ಖಂಡಿಸಿದ್ದಾರೆ.

ಕೆಕೆಆರ್​ ತಂಡದ ಮಾಜಿ ಆಟಗಾರನಾಗಿರುವ ಮನೋಜ್​ ತಿವಾರಿ ಶುಬ್ಮನ್​ ಗಿಲ್ ಡೆಲ್ಲಿ ವಿರುದ್ದದ ಪಂದ್ಯದಲ್ಲಿ 65 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಆಗಿದ್ದರು. ಗಿಲ್​ ಉತ್ತಮ ಪ್ರದರ್ಶನ ತೋರಿದರು ಕಳಪೆ ಪ್ರದರ್ಶನ ತೋರುತ್ತಿರುವ ಸುನಿಲ್​ ನರೈನ್​ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದ ನಾಯಕ ಕಾರ್ತಿಕ್​ ನಡೆಯನ್ನು ತಿವಾರಿ ಟ್ವೀಟ್​ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ.

ಇದರ ಜೊತೆ ಮತ್ತೊಂದ ಟ್ವೀಟ್​ ಮಾಡಿದ್ದು ಚೆನ್ನೈ ಪಂದ್ಯದ ಮಾರನೆ ದಿನ ವಿಶ್ವಕಪ್​ ಆಯ್ಕೆ ಇದ್ದಿದ್ರಿಂದ ತಮ್ಮ ಬ್ಯಾಟಿಂಗ್​ ಕೌಶಲ್ಯವನ್ನು ತೋರಿಸುವ ಸಲುವಾಗಿ ತಾವು ಮೊದಲು ಆಡಿರಬಹುದು ಎಂದು ನನಗೆ ಈಗ ಆರ್ಥವಾಗಿದೆ ಎಂದು ತಮ್ಮ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ತಿವಾರಿ ಟೀಂ ಇಂಡಿಯಾ ಪರ 12 ಏಕದಿನ ಪಂದ್ಯ 3 ಟಿ20 ಪಂದ್ಯವಾಡಿದ್ದಾರೆ. ಕಳೆದ ಐಪಿಎಲ್​ ಸೀಸನ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಪರ ಆಡಿದ್ದ ತಿವಾರಿಯನ್ನು ಈ ಬಾರಿ ಹರಾಜಿನಲ್ಲಿ ಯಾವ ಫ್ರಾಂಚೈಸಿಯು ಖರೀದಿಸಿರಲಿಲ್ಲ.

ABOUT THE AUTHOR

...view details