ಕರ್ನಾಟಕ

karnataka

ETV Bharat / briefs

ಹಾಸನದಲ್ಲಿ ಜೆಡಿಎಸ್​ ಅಭ್ಯರ್ಥಿ ಗೆಲುವು ಸುಲಭವಲ್ಲ: ಪ್ರೀತಂ ಗೌಡ - ದೇವೇಗೌಡ

ಈ ಚುನಾವಣೆ ನಡೆಯುತ್ತಿರುವುದು ದೇಶದ ಭದ್ರತೆ ಹಾಗೂ ಕುಟುಂಬ ರಾಜಕಾರಣದ ವಿರುದ್ಧ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎ.ಮಂಜು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪ್ರೀತಂ ಜೆ. ಗೌಡ

By

Published : Mar 29, 2019, 4:24 AM IST

ಹಾಸನ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಅಷ್ಟು ಸುಲಭವಾಗಿಲ್ಲ ಎಂದು ಶಾಸಕ ಪ್ರೀತಂ ಜೆ. ಗೌಡ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್​ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಇನ್ನೂ ಯುವಕ. ರಾಜಕೀಯವಾಗಿ ಬೆಳೆಯಬೇಕೆಂದು ನನಗೂ ಆಸೆ ಇತ್ತು. ಪ್ರಜ್ವಲ್​ಗೆ ವಿಧಾನಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡು ಬೆಳೆಯುವ ಅವಕಾಶವಿತ್ತು. ಆದರೆ, ಹಿರಿಯರಾದ ದೇವೇಗೌಡರಿಂದ ಕ್ಷೇತ್ರ ಕಸಿದುಕೊಂಡು ಸ್ಪರ್ಧಿಸಲು ಮುಂದಾಗಿದ್ದಾರೆ. ರಾಜಕಾರಣ ನಿಂತ ನೀರಲ್ಲ. ಚುನಾವಣೆ ಸಮಯದಲ್ಲಿ ರಾಜಕೀಯ ಧೃವೀಕರಣ ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಪಕ್ಷಾಂತರವಾಗಿರುವ ನಾಯಕರಿಗೆ ಸಾಮರ್ಥ್ಯವಿಲ್ಲವೆಂದು ಲಘುವಾಗಿ ಮಾತನಾಡುವುದು ಸರಿಯಲ್ಲ.

ಶಾಸಕ ಪ್ರೀತಂ ಜೆ. ಗೌಡ

ಬಿಜೆಪಿ ಜಿಲ್ಲಾಧ್ಯಕ್ಷ ಎಚ್. ಯೋಗಾ ರಮೇಶ್ ಅವರ ಅಸಮಾಧಾನ ವೈಯಕ್ತಿಕ ವಿಚಾರ. ಜಿಲ್ಲಾಧ‍್ಯಕ್ಷ ಎಂಬುದು ಜಿಲ್ಲೆಯ ಜವಾಬ್ದಾರಿ.ಪಕ್ಷವನ್ನು ಅವರಿಗೆ ಬರೆದುಕೊಟ್ಟಿಲ್ಲ. ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಸಾಕಷ್ಟಿದೆ. ಈ ಚುನಾವಣೆ ನಡೆಯುತ್ತಿರುವುದು ದೇಶದ ಭದ್ರತೆ ಹಾಗೂ ಕುಟುಂಬ ರಾಜಕಾರಣದ ವಿರುದ್ಧ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎ.ಮಂಜು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನಿಂದಲೆ ಬೆಳಕಾಗುತ್ತೆ ಎಂಬ ಭ್ರಮೆಯಲ್ಲಿ ಯಾರೂ ಇರಬಾರದು. ನಾನು ಪಕ್ಷ ತೊರೆದ ಅಥವಾ ಹೇಳಿದ ತಕ್ಷಣ ಸಾವಿರಾರು ಮತಗಳನ್ನು ಬದಲಿಸುತ್ತೇನೆ ಎಂಬ ಭ್ರಮೆಯೂ ತಪ್ಪು. ಜಿಲ್ಲೆಯ ಜನತೆ ದಬ್ಬಾಳಿಕೆ ಮತ್ತು ಶೋಷಣೆಗೆ ಬೇಸತ್ತಿದ್ದಾರೆ. ಬಿಜೆಪಿಗೆ ಎ.ಮಂಜು ಆಗಲಿ, ಯೋಗಾ ರಮೇಶ್ ಆಗಲಿ ಅಥವಾ ನಾನಾಗಲಿ ಮುಖ್ಯವಲ್ಲ. ಪಕ್ಷ ತೊರೆದು ಇತಿಹಾಸ ನಿರ್ಮಿಸುತ್ತೇನೆಂದು ಭ್ರಮೆಯಲ್ಲಿ ಇರಬಾರದು. ಇದೊಂದು ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿ ಚುನಾವಣೆ ಅಲ್ಲ ಎಂದು ಟಾಂಗ್ ನೀಡಿದರು.

ದೇಶಕ್ಕೆ ನರೇಂದ್ರ ಮೋದಿ ಬೇಕೋ ಅಥವಾ ಜಿಲ್ಲೆಯಲ್ಲಿ ಆರು ಜೆಡಿಎಸ್ ಶಾಸಕರ ಅಭ್ಯರ್ಥಿ ಬೇಕೋ ಜನ ತೀರ್ಮಾನಿಸುತ್ತಾರೆ. ಜಿಲ್ಲೆಯಾದ್ಯಂತ ಬಿಜೆಪಿ ಅಭ್ಯರ್ಥಿ ಪರ ಒಲವಿದೆ. ಏಪ್ರಿಲ್ 10 ಅಥವಾ 11 ರಂದು ನರೇಂದ್ರ ಮೋದಿ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ABOUT THE AUTHOR

...view details