ಕರ್ನಾಟಕ

karnataka

ETV Bharat / briefs

ಐದನೇ ಹಂತದ ಮತದಾನ ಮುಕ್ತಾಯ... ಜಮ್ಮು ಕನಿಷ್ಠ, ಪ.ಬಂಗಾಳ ಮತ್ತೆ ಟಾಪ್..! - ಲೋಕಸಭಾ ಚುನಾವಣೆ

ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಐದನೇ ಹಂತದ ವೋಟಿಂಗ್ ಇಂದು ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆವರೆಗೆ ನಡೆದಿತ್ತು.

ಮತದಾನ

By

Published : May 6, 2019, 8:50 PM IST

ನವದೆಹಲಿ:ದೇಶದ ಏಳು ರಾಜ್ಯಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ.

ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಐದನೇ ಹಂತದ ವೋಟಿಂಗ್ ಇಂದು ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆವರೆಗೆ ನಡೆದಿತ್ತು.

ಏಳು ರಾಜ್ಯಗಳ 51 ಸೀಟುಗಳಿಗೆ ಶೇ.62.56ರಷ್ಟು ಮತದಾನ ನಡೆದಿದೆ. ಇಂದಿನ ಹಂತದೊಂದಿಗೆ ದೇಶದಲ್ಲಿ ಶೇ.80ರಷ್ಟು ವೋಟಿಂಗ್ ಪೂರ್ಣವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಂತದಲ್ಲೂ ಕನಿಷ್ಠ ಮತದಾನವಾಗಿದ್ದರೆ ಅತ್ತ ಗಲಾಟೆಗಳ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಮತದಾನ ನಡೆದಿದೆ.

ಆರನೇ ಹಂತದ ಮತದಾನ ಮೇ 12(ಭಾನುವಾರ)ದಂದು 59 ಲೋಕಸಭಾ ಕ್ಷೇತ್ರಗಳಿಗೆ ಜರುಗಲಿದೆ. ದೆಹಲಿ, ಬಿಹಾರ,ಹರಿಯಾಣ, ಜಾರ್ಖಂಡ್, ಮಧ್ಯ ಪ್ರದೇಶ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ವೋಟಿಂಗ್ ನಡೆಯಲಿದೆ.

ಸಂಜೆ 6 ಗಂಟೆವರೆಗಿನ ಶೇಕಡಾವಾರು ಮತದಾನ

ಬಿಹಾರ - ಶೇ.57.76

ಜಮ್ಮು ಮತ್ತು ಕಾಶ್ಮೀರ - ಶೇ.17.07

ಮಧ್ಯಪ್ರದೇಶ - ಶೇ.63.59

ರಾಜಸ್ಥಾನ - ಶೇ.63.41

ಉತ್ತರ ಪ್ರದೇಶ - ಶೇ.55.92

ಪಶ್ಚಿಮ ಬಂಗಾಳ - ಶೇ.74.15

ಜಾರ್ಖಂಡ್ - ಶೇ.64.23

ABOUT THE AUTHOR

...view details