ಕರ್ನಾಟಕ

karnataka

ETV Bharat / briefs

ಇರಿತಕ್ಕೊಳಗಾಗಿದ್ದ ವ್ಯಕ್ತಿ ಸಾವು: ಆರೋಪಿಗಾಗಿ ಬೈಯಪ್ಪನಹಳ್ಳಿ ಪೊಲೀಸರ ಹುಡುಕಾಟ

ನಿನ್ನೆ ಸಂಜೆ ಚಾಕು ಇರಿತದಿಂದ ಗಂಭೀರ ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಶಂಕರ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ವ್ಯಕ್ತಿ ಸಾವು

By

Published : Feb 25, 2019, 11:30 AM IST

ಬೆಂಗಳೂರು: ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಾವಾರಪಾಳ್ಯದಲ್ಲಿ ನಿನ್ನೆ ಸಂಜೆ ‌ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಶಂಕರ್, ಇಂದು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಶಂಕರ್, ಚಾಕು ಇರಿತದಿಂದ ಗಂಭೀರ ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದರು.

ನಿನ್ನೆ ವಾಟಾಳ್ ನಾಗರಾಜ್ ಬಂಟರಲ್ಲಿ ಜೂನಿಯರ್-ಸೀನಿಯರ್ ಅನ್ನೋ ವಿಚಾರಕ್ಕೆ ಗಲಾಟೆ ನಡೆದಿತ್ತು. ನಾರಾಯಣಸ್ವಾಮಿ ಬಲಗೈ ಬಂಟ ಪ್ರವೀಣ್ ಎಂಬಾತ ಗಲಾಟೆ ಮಾಡಿ ಶಂಕರ್​ಗೆ ಚಾಕು ಇರಿದಿದ್ದ.‌‌ ಇನ್ನು ಮೃತ ಶಂಕರ್ ನಾಗಾವಾರಪಾಳ್ಯದಲ್ಲಿ ವಾಸವಿದ್ದು, ರೌಡಿಸಂನಲ್ಲೂ ಆ್ಯಕ್ಟೀವ್ ಆಗಿದ್ದ ಎನ್ನಲಾಗಿದೆ.

ಇರಿತಕ್ಕೊಳಗಾಗಿದ್ದ ವ್ಯಕ್ತಿ ಸಾವು

ನಿನ್ನೆ ಸಂಜೆ ಪ್ರವೀಣ್ ಹಾಗೂ ಶಂಕರ್ ಇಬ್ಬರೂ ಭೇಟಿಯಾಗಿ ಗಲಾಟೆ ಮಾಡಿದ್ರು. ನಂತ್ರ ಚಾಕು ಇರಿದು ಪ್ರವೀಣ್ ಎಸ್ಕೇಪ್ ಆಗಿದ್ದ. ತಕ್ಷಣ ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದ ಶಂಕರ್​ನನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗಳಾಗಿ, ತೀವ್ರ ರಕ್ತಸ್ರಾವವಾದ ಹಿನ್ನಲೆ, ಶಂಕರ್ ಸಾವನ್ನಪ್ಪಿದ್ದಾನೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಬೈಯ್ಯಪ್ಪನಹಳ್ಳಿ ಪೊಲೀಸರು, ಆರೋಪಿ ಪ್ರವೀಣ್​ಗಾಗಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details