ಕರ್ನಾಟಕ

karnataka

ETV Bharat / briefs

ಸೌದಿ ಏರ್​ಲೈನ್ಸ್​​​​​ನಲ್ಲಿ ಮಹಿಳಾ ಸಿಬ್ಬಂದಿ ಎದುರೇ ಜಿಪ್​ ಬಿಚ್ಚಿದ ಭೂಪ... ಆ ಮೇಲೆ ಆಗಿದ್ದೇನು..? - ವಿಮಾನ

ಮಹಿಳಾ ಸಿಬ್ಬಂದಿ ಆತ ಸಿಗರೇಟ್​ ಸೇದಲು ಲೈಟರ್​ ಆನ್​ ಮಾಡಲು ಬಿಟ್ಟಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಅಬ್ದುಲ್​ ಎಂಬಾತ ಅಸಭ್ಯವಾಗಿ ನಿಂದನೆ ಮಾಡಿದ್ದ. ಅಷ್ಟೇ ಅಲ್ಲ ಸುಖಾ ಸುಮ್ಮನೆ ಗದ್ದಲ ಎಬ್ಬಿಸಿದ್ದಲ್ಲದೇ ಪ್ಯಾಂಟ್​ ಜಿಪ್​ ಬಿಚ್ಚಿ ರಂಪಾಟ ಮಾಡಿಕೊಂಡಿದ್ದ.

ಸೌದಿ ಏರ್​ಲೈನ್ಸ್

By

Published : May 28, 2019, 5:09 PM IST

ನವದೆಹಲಿ:ಸೌದಿ ಅರೇಬಿಯಾದ ಝಡ್ಡಾದಿಂದ ನವದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದ ಸೌದಿ ಏರ್​​ಲೈನ್ಸ್​ ವಿಮಾನದಲ್ಲಿ ಕೇರಳದ ಕೊಟ್ಟಾಯಂ ಮೂಲದ ವ್ಯಕ್ತಿ, ಅಲ್ಲಿನ ಮಹಿಳಾ ಸಿಬ್ಬಂದಿ ಎದುರೇ ಜಿಪ್​ ಬಿಚ್ಚಿ ಪೊಲೀಸರ ಅತಿಥಿಯಾಗಿದ್ದಾನೆ.

ಹೀಗೆ ವಿಮಾನದಲ್ಲಿ ದುರ್ವರ್ತನೆ ತೋರಿಸಿದ ವ್ಯಕ್ತಿಯನ್ನ ಕೇರಳ ಮೂಲದ ಕೊಟ್ಟಾಯಂ ನಿವಾಸಿ 24 ವರ್ಷದ ಅಬ್ದುಲ್​ ಶಾಹಿದ್​ ಶಂಶುದ್ದೀನ್​ ಎಂದು ಗುರುತಿಸಲಾಗಿದೆ. ಅಲ್ಲಿನ ವಿಮಾನಯಾನ ಸಿಬ್ಬಂದಿ ಹೇಳುವ ಪ್ರಕಾರ, ಹೀಗೆ ಪ್ಯಾಂಟ್​ನ ಜಿಪ್​ ಬಿಚ್ಚುವ ಮುನ್ನ ಅಸಭ್ಯವಾಗಿ ಮಾತನಾಡಿದ್ದ ಎನ್ನಲಾಗಿದೆ.

ಮಹಿಳಾ ಸಿಬ್ಬಂದಿ ಆತ ಸಿಗರೇಟ್​ ಸೇದಲು ಲೈಟರ್​ ಆನ್​ ಮಾಡಲು ಬಿಟ್ಟಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಅಬ್ದುಲ್​ ಅಸಭ್ಯವಾಗಿ ನಿಂದನೆ ಮಾಡಿದ್ದ. ಅಷ್ಟೇ ಅಲ್ಲ ಸುಖಾ ಸುಮ್ಮನೆ ಗದ್ದಲ ಎಬ್ಬಿಸಿದ್ದಲ್ಲದೇ ಪ್ಯಾಂಟ್​ ಜಿಪ್​ ಬಿಚ್ಚಿ ರಂಪಾಟ ಮಾಡಿಕೊಂಡಿದ್ದ. ಮಹಿಳೆ ತಕ್ಷಣ ಸಹಾಯಕ್ಕಾಗಿ ಇತರ ಸಿಬ್ಬಂದಿಯನ್ನ ಕರೆದಿದ್ದರು.

ಆ ಬಳಿಕ ನವದೆಹಲಿ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ಏರ್​​​ಲೈನ್ಸ್​ ಸಿಬ್ಬಂದಿ ಇಂದಿರಾಗಾಂಧಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ಆ ಬಳಿಕ ಐಜಿಐ ಸಿಬ್ಬಂದಿ ಆರೋಪಿ ಅಬ್ದುಲ್​​​ನನ್ನು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ABOUT THE AUTHOR

...view details