ರಾಯಚೂರು:ಐತಿಹಾಸಿಕ ಹಿನ್ನೆಲೆ ಹೊಂದಿರುವಜಿಲ್ಲೆಯ ಕಾಟೆ ದರ್ವಾಜಾ ಕೋಟೆ ಪ್ರಸ್ತುತ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಶತ್ರು ಪಡೆಗಳು ಸುಲಭವಾಗಿ ಬಾರದಿರಲು ಈ ಕೋಟೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ರಾಯಚೂರಿನಲ್ಲಿರುವ ಕಾಟೆ ದರ್ವಾಜಾ ಕೋಟೆಯನ್ನು ವಾರಂಗಲ್ನ ಕಾಕತೀಯ ವಂಶಸ್ಥರು ನಿರ್ಮಿಸಿದ್ದಾರೆ ಎನ್ನಲಾಗಿದೆ.
ನಗರದ ಹೃದಯ ಭಾಗದಲ್ಲಿ ಇರುವ ಕಾಟೆ ದರ್ವಾಜಾ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ.ಇದು ಮೊಗಲ್ ವಂಶಸ್ಥರಿಂದ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತುಗಳೂ ಇವೆ.ಕಾಟೆ ದರ್ವಾಜಾಕ್ಕೆ ಎರಡು ದ್ವಾರವಿದ್ದು ಬೃಹತ್ ಕಲ್ಲುಗಳಿಂದ ಮಾಡಲಾಗಿದೆ. ಕಾಟೆ ದರ್ವಾಜಾ ಇದು ಉರ್ದು ಶಬ್ದವಾಗಿದೆ ಇದನ್ನು ಕನ್ನಡದಲ್ಲಿ ಮುಳ್ಳುಗಸೆ ಅಥವಾ ಮುಳ್ಳಿನ ಬಾಗಿಲು ಎಂಬ ಅರ್ಥ ನೀಡುತ್ತದೆ.
ಹಿಂದೆ ಕೋಟೆ ದ್ವಾರಗಳನ್ನು ಶತ್ರುಗಳಿಂದ ರಕ್ಷಿಸಲು ದ್ವಾರಗಳಿಗೆ ಭರ್ಚಿಗಳನ್ನು ಸಿಕ್ಕಿಸಿ ಸಿದ್ದಪಡಿಸಲಾಗುತ್ತಿತ್ತು. ಇದರ ಜೊತೆಗೆ ಶತ್ರುಗಳು ದ್ವಾರಗಳನ್ನು ಸುಲಭವಾಗಿ ಹೊಡೆದು ಸುಲಭವಾಗಿ ಪ್ರವೇಶಿಸದಿರಲಿ ಎಂಬ ರಕ್ಷಣೆಯ ಭಾಗವಾಗಿ ಈ ಬಾಗಿಲು (ದರ್ವಾಜಗಳ) ನಿರ್ಮಾಣದ ಉದ್ದೇಶವಾಗಿತ್ತು.
ಈ ಕಾಟೆ ದರ್ವಾಜೆಯ ವಿಶಿಷ್ಟ ನೋಡುವುದಾದ್ರೆ ಇದು ಒಂದು ಗುಂಬಜ್ ಹಾಗೂ ಹಲವಾರು ಕಮಾನುಗಳನ್ನು ಹಾಗೂ ಸಣ್ಣ ಸಣ್ಣ ಕಿಟಕಿಗಳು ಇವೆ. ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಈ ಕಾಟೆ ದರ್ವಾಜ ಈಗ ಅವನತಿಯತ್ತ ಸಾಗುತ್ತಿದೆ.
ಇಲ್ಲಿ ಈಗ ಸುತ್ತಲೂ ಧೂಳು ಹಿಡಿದಿದೆ ಅಲ್ಲದೇ ಮೂಲ ರೂಪ ಕಳೆದುಕೊಳ್ಳುವ ಜೊತೆಗೆ ಇಲ್ಲಿ ಸ್ಥಳೀಯರು ಕಟ್ಟಿಗೆ,ಟೇಬಲ್ ಇತರೆ ವಸ್ತುಗಳಿಂದ ಪರಿಸರ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪ್ರಾಚ್ಯವಸ್ತು ವಸ್ತು ಇಲಾಖೆ ಗಮನ ಹರಿಸಿ ರಕ್ಷಣೆ ಮಾಡುವ ಜೊತೆಗೆ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಮಾಡಬೇಕಿದೆ.