ಜೆರುಸಲೇಂ(ಇಸ್ರೇಲ್): ಇಸ್ರೇಲ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದ್ದು ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೆ ಅಧಿಕಾರ ಗದ್ದುಗೆ ಏರುವುದು ಸ್ಪಷ್ಟವಾಗಿದೆ.
ಮೂಲಗಳ ಪ್ರಕಾರ ಶೇ.97ರಷ್ಟು ಮತಎಣಿಕೆ, ನೆತನ್ಯಾಹು ಪಕ್ಷ ಸಂಪೂರ್ಣ ಬಹುಮತದಿಂದ ಮುನ್ನಡೆ ಸಾಧಿಸಿದ್ದು, ಬೆನ್ನಿ ಗಂಟ್ಜ್ ತೀವ್ರ ಪೈಪೋಟಿ ನಡುವೆಯೂ ನೆತನ್ಯಾಹು ದಾಖಲೆಯ ಐದನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರುವುದು ಖಚಿತವಾಗಿದೆ.
ಭ್ರಷ್ಟಾಚಾರ ಹಾಗೂ ಕೆಲ ಖಾಸಗಿ ವಿವಾಗಳಿಂದ ನೆತನ್ಯಾಹು ಚುನಾವಣೆಯಲ್ಲಿ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿದ್ದರು. ಇವೆಲ್ಲದರ ನಡುವೆಯೂ ನೆತನ್ಯಾಹು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈಗಾಗಲೇ ಗೆಲುವು ಬಹುತೇಕ ಖಚಿತವಾಗಿದ್ದು ಅಂತಿಮ ಫಲಿತಾಂಶ ಶುಕ್ರವಾರ ಘೋಷಣೆಯಾಗಲಿದೆ. ನೆತನ್ಯಾಹು ಮತ್ತೆ ಪ್ರಧಾನಿ ಹುದ್ದೆಗೇರಿದಲ್ಲಿ 71 ವರ್ಷಗಳ ಇಸ್ರೇಲ್ ಇತಿಹಾಸದಲ್ಲಿ ದೀರ್ಘ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.