ಕರ್ನಾಟಕ

karnataka

ETV Bharat / briefs

ಐಪಿಎಲ್​ ಎಲಿಮಿನೇಟರ್​​: ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಫೀಲ್ಡಿಂಗ್ ಆಯ್ಕೆ - ವಿಶಾಖಪಟ್ಟಣಂ

ಎಲಿಮಿನೇಟರ್​​ನಲ್ಲಿ ವಿಜೇತ ತಂಡ ಮೇ 10ರಂದು ಇದೇ ಮೈದಾನದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಜೊತೆ ಸೆಣಸಲಿದೆ. ಎರಡನೇ ಕ್ವಾಲಿಫೈಯರ್​ನಲ್ಲಿ ಗೆದ್ದ ಟೀಮ್ ಫೈನಲ್​ನಲ್ಲಿ ಮುಂಬೈ ಜೊತೆಗೆ ಪ್ರಶಸ್ತಿಗಾಗಿ ಕಾದಾಡಲಿವೆ.

ಎಲಿಮಿನೇಟರ್

By

Published : May 8, 2019, 7:16 PM IST

Updated : May 8, 2019, 8:07 PM IST

ವಿಶಾಖಪಟ್ಟಣಂ:ಐಪಿಎಲ್​ ಟೂರ್ನಿಯ ಎಲಿಮಿನೇಟರ್​​ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸನ್​ರೈಸರ್ಸ್ ಹೈದರಾಬಾದ್ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದೆ.

ಎಲಿಮಿನೇಟರ್​ ಉಭಯ ತಂಡಗಳಿಗೂ ಫೈನಲ್ ಆಸೆಯಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಾಯಕವಾಗಿದ್ದು, ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಬದಲಾವಣೆ ಮಾಡಿಕೊಂಡಿವೆ.

ಡೆಲ್ಲಿ ತಂಡಕ್ಕೆ ಕಾಲಿನ್ ಇನ್​ಗ್ರಾಮ್ ಬದಲಿಗೆ ಕಾಲಿನ್ ಮುನ್ರೋ ತಂಡಕ್ಕೆ ಬಂದಿದ್ದಾರೆ. ಹೈದರಾಬಾದ್​​​ ತಂಡದಲ್ಲಿ ಯೂಸುಫ್​ ಪಠಾಣ್​ ಹೊರಗುಳಿದಿದ್ದು ಇವರ ಸ್ಥಾನಕ್ಕೆ ದೀಪಕ್ ಹೂಡಾ ಕಾಣಿಸಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್:

ಶ್ರೇಯಸ್ ಅಯ್ಯರ್​(ನಾಯಕ), ಪೃಥ್ವಿ ಶಾ, ಶಿಖರ್ ಧವನ್, ಕಾಲಿನ್ ಮುನ್ರೋ, ರಿಷಭ್ ಪಂತ್, ಶೆರ್ಫಾನೆ ರುದರ್​ಫೋರ್ಡ್​, ಅಕ್ಷರ್ ಪಟೇಲ್​​, ಕೀಮೋ ಪೌಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮ, ಟ್ರೆಂಟ್ ಬೌಲ್ಟ್

ಹೈದರಾಬಾದ್:

ಕೇನ್​​ ವಿಲಿಯಂಸನ್​(ನಾಯಕ), ವೃದ್ಧಿಮಾನ್​ ಸಹಾ, ಮಾರ್ಟಿನ್ ಗಪ್ಟಿಲ್​​, ಮನೀಷ್ ಪಾಂಡೆ, ವಿಜಯ್ ಶಂಕರ್, ಮೊಹಮ್ಮದ್ ನಬಿ, ದೀಪಕ್ ಹೂಡಾ, ರಶೀದ್ ಖಾನ್​, ಭುವನೇಶ್ವರ್​ ಕುಮಾರ್, ಖಲೀಲ್ ಅಹ್ಮದ್, ಬಾಸಿಲ್ ಥಂಪಿ

Last Updated : May 8, 2019, 8:07 PM IST

ABOUT THE AUTHOR

...view details