ಹಾಸನ:ಈ ಜಿಲ್ಲೆ ಮಾಜಿ ಪ್ರಧಾನಿ ದೇವೇಗೌಡರ ತವರು. ಆದರೆ, ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕ್ಷೇತ್ರ ಬಿಟ್ಕೊಟ್ಟು ತುಮಕೂರು ಕಡೆಗೆ ವಲಸೆ ಹೋದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಯುವ ಮುಖ. ಆದರೆ, ಹಳೆ ಹುಲಿ ಎ.ಮಂಜು ಬಿಜೆಪಿಯಿಂದ ಸ್ಪರ್ಧಿಸಿದ್ರಿಂದ ಕದನ ರಂಗೇರಿತ್ತು. ಈಗ ಮತದಾನದ ಬಳಿಕ ತಮಗೆ ಎಷ್ಟೆಷ್ಟು ಪ್ರಮಾಣದಲ್ಲಿ ಮತ ಬಂದಿವೆ ಅನ್ನೋ ಬಗ್ಗೆ ಲೆಕ್ಕ ನಡೀತಿದೆ...
2014ರಲ್ಲಿ ಎ.ಮಂಜು ಕೈನಿಂದ ಸ್ಪರ್ಧಿಸಿ 4,09,379 ಮತ ಪಡೆದ್ರೇ, ಹೆಚ್‌ಡಿಡಿ 5,09,841 ವೋಟ್ ಗಿಟ್ಟಿಸಿದ್ದರು. ಹೆಚ್‌ಡಿಡಿ 1ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಹಾಸನದಲ್ಲಿ 8 ಎಂಎಲ್‌ಎ ಕ್ಷೇತ್ರಗಳಿವೆ. ಹಾಸನ, ಕಡೂರಿನಲ್ಲಿ ಬಿಜೆಪಿ ಎಂಎಲ್‌ಎ ಗಳಿದ್ದಾರೆ. ಇದರ ಜತೆಗೆ ಅರಕಲಗೂಡು, ಬೇಲೂರು, ಸಕಲೇಶಪುರದಲ್ಲೂ ಹೆಚ್ಚು ಮತ ಪಡೆದು 1 ಲಕ್ಷಕ್ಕೂ ಅಧಿಕ ಲೀಡ್‌ನಿಂದ ಗೆಲ್ಲುವ ವಿಶ್ವಾಸ ಎ.ಮಂಜು ಅವರದು. ಆದರೆ, ಜೆಡಿಎಸ್ ಎದುರಾಳಿ ಕಾಂಗ್ರೆಸ್ ಜತೆಗೆ ಮೈತ್ರಿಯಾಗಿದ್ರಿಂದ 2 ಲಕ್ಷದಿಂದ ಗೆಲ್ಲುವ ವಿಶ್ವಾಸ ಪ್ರಜ್ವಲ್ ವ್ಯಕ್ತಪಡಿಸ್ತಿದ್ದಾರೆ.
ಹಾಸನ ಮತ್ತು ಕಡೂರು ಬಿಟ್ರೇ, ಉಳಿದೆಲ್ಲ ಎಂಎಲ್‌ಎ ಕ್ಷೇತ್ರದಲ್ಲೂ ಜೆಡಿಎಸ್ ಶಾಸಕರಿದ್ದಾರೆ. ಇವೆಲ್ಲ ಮೈತ್ರಿಗೆ ವರದಾನವಾಗುತ್ತೆ ಅನ್ನೋ ವಿಶ್ವಾಸ ಪ್ರಜ್ವಲ್‌ರದು. ಮೈತ್ರಿ ಮತ್ತು ಬಿಜೆಪಿ ಇಬ್ಬರೂ ಒಕ್ಕಲಿಗ ಅಭ್ಯರ್ಥಿಗಳು. ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಹೆಚ್ಚಿವೆ.
ಜಾತಿವಾರು ಬಲಾಬಲ :
ಒಟ್ಟು ಮತದಾರರು- 16,49,827 ಲಕ್ಷ
ಒಕ್ಕಲಿಗ - 5 ಲಕ್ಷ
ಲಿಂಗಾಯಿತ - 3 ಲಕ್ಷ
ಎಸ್‌ಸಿ -ಎಸ್‌ಟಿ- 3 ಲಕ್ಷ
ಕುರುಬ- 2 ಲಕ್ಷ
ಮುಸ್ಲಿಂ-2 ಲಕ್ಷ
ಇತರ-1.8 ಲಕ್ಷ
ಕ್ಷೇತ್ರದಲ್ಲಿ ಒಟ್ಟು 16,49,827 ಲಕ್ಷ ಮತದಾರರಿದ್ದಾರೆ. ಒಕ್ಕಲಿಗ ಅಂದಾಜು 5 ಲಕ್ಷ, ಲಿಂಗಾಯಿತ 3, ಎಸ್‌ಸಿ -ಎಸ್‌ಟಿ 3, ಕುರುಬ ಸಮುದಾಯ 2 ಲಕ್ಷ, ಮುಸ್ಲಿಂ 2 ಹಾಗೂ ಇತರ-1.8 ಲಕ್ಷ ಮತದಾರರಿದ್ದಾರೆ. 8 ಎಂಎಲ್‌ಎ ಕ್ಷೇತ್ರಗಳಲ್ಲೂ ಸರಾಸರಿ 1.5 ಲಕ್ಷದಷ್ಟು ಮತ ಚಲಾವಣೆಯಾಗಿವೆ. ಅರಕಲಗೂಡು ಗರಿಷ್ಠ, ಹಾಸನ ಕ್ಷೇತ್ರ ಕನಿಷ್ಠ ಮತದಾನವಾಗಿದೆ.
ಮತ ಪ್ರಮಾಣ ಎಲ್ಲೆಲ್ಲಿ, ಎಷ್ಟೆಷ್ಟು ?
ಅರಕಲಗೂಡು-1,78,872 (81.48%)
ಹೊಳೇನರಸೀಪುರ-1,72,561 (81.22%)