ಮುಂಬೈ: 2019 ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗುವ ನೆಚ್ಚಿನ ತಂಡದ ಎಂದಿರುವ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂಗ್ಲೆಂಡ್ಗೆ ಪ್ರಬಲ ಪೈಪೋಟಿ ನೀಡುವ ತಂಡಗಾಳಾಗಿವೆ ಎಂದಿದ್ದಾರೆ.
ಆಸ್ಟ್ರೇಲಿಯಾ ತಂಡದ ನಾಯಕನಾಗಿ 2 ಬಾರಿ ತಮ್ಮ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿರುವ ರಿಕಿ ಪಾಂಟಿಂಗ್ 2019 ರ ವಿಶ್ವಕಪ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾಕ್ಕಿಂತ ಆತಿಥೇಯ ಇಂಗ್ಲೆಂಡ್ ತಂಡವೇ ಚಾಂಪಿಯನ್ ಆಗುವ ನೆಚ್ಚಿನ ತಂಡದ ಎಂದಿದ್ದಾರೆ.
ಇಂಗ್ಲೆಂಡ್ ಏಕೆ ನೆಚ್ಚಿನ ತಂಡ?
2000ದ ದಶಕದ ಕ್ರಿಕೆಟ್ ಆಟಗಾರ ಪ್ರಶಸ್ತಿ ವಿಜೇತರಾಗಿರುವ ಆಸ್ಟ್ರೆಲಿಯಾದ ಮಾಜಿ ಕಪ್ತಾನ ಇಂಗ್ಲೆಂಡ್ ಚಾಂಪಿಯನ್ ಆಗಲು ಎರಡು ಕಾರಣ ನೀಡಿದ್ದಾರೆ. ಈ ಬಾರಿ ವಿಶ್ವಕಪ್ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವುದರಿಂದ ತವರಿನ ಬಲ ಹಾಗೂ ಕಳೆದ 2 ವರ್ಷಗಳಿಂದ ಇಂಗ್ಲೆಂಡ್ ತಂಡ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್ ಕ್ರಮಾಂಕ ಎಲ್ಲ ವಿಭಾಗದಲ್ಲೂ ಸದೃಢವಾಗಿರುವುದೇ ಇಂಗ್ಲೆಂಡ್ಗೆ ಧನಾತ್ಮಕ ಅಂಶವಾಗಿದೆ ಎಂದಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾದಿಂದ ಪೈಪೋಟಿ
ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ತಂಡ ಎಂದಿರುವ ಪಾಂಟಿಂಗ್ ಜೊತೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂಗ್ಲೆಂಡ್ಗೆ ಕಠಿಣ ಸವಾಲೊಡ್ಡಲಿವೆ ಎಂದಿದ್ದಾರೆ. ಇವರೆಡಲ್ಲದೆ ದ. ಅಫ್ರಿಕಾ, ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕೂಡ ಇಂಗ್ಲೆಂಡ್ಗೆ ಶಾಕ್ ನೀಡಿದರೆ ಅಚ್ಚರಿಯೇನಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.