ಕರ್ನಾಟಕ

karnataka

ETV Bharat / briefs

ಅಪ್ರಾಪ್ತೆಗೆ ಗಾಂಜಾ ಕೊಟ್ಟು, ವಿವಸ್ತ್ರಗೊಳಿಸಿ ಬ್ಲೇಡ್‌ನಿಂದ ಹಲ್ಲೆಗೈದು ವಿಕೃತಿ!

ಹೈದರಾಬಾದ್​: ನಂಬಿ ತನ್ನ ಹಿಂದೆ ಬಂದ ಬಾಲಕಿಗೆ ಗಾಂಜಾ ಮತ್ತಿನಲ್ಲಿದ್ದ ಬಾಲಕ ತನ್ನ ಸ್ನೇಹಿರರೊಡನೆ ಸೇರಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಹೈದರಾಬಾದ್​ನ ಗಾಂಧಿನಗರನಲ್ಲಿ ನಡೆದಿದೆ. ಘಟನೆ ಬಳಿಕ ಇದು ತಡವಾಗಿ ಬೆಳಕಿಗೆ ಬಂದಿದೆ.

By

Published : Mar 9, 2019, 1:33 PM IST

ಕೃಪೆ: eenadu.net

ಅಪ್ರಾಪ್ತ ಬಾಲಕಿಗೆ ಮೂವರು ಬಾಲಕರು ಪರಿಚಯವಾಗಿದ್ದರಂತೆ. ಆ ಮೂವರೂ ಬಾಲಕಿಗೆ ಗಾಂಜಾ ಸೇವಿಸುವುದನ್ನು ಕಲಿಸಿದ್ದಾರೆ. ಗುರುವಾರದಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಎಲ್ಲರೂ ಗಾಂಜಾ ಸೇವಿಸಿದ್ದಾರೆ. ಅಪ್ರಾಪ್ತೆಯ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ.

ಮೂವರು ಬಾಲಕರಲ್ಲೊಬ್ಬ ಆಕೆಯನ್ನು ವಿವಸ್ತ್ರಗೊಳಿಸಿದ್ದಾನೆ. ಬಳಿಕ ಬಾಲಕಿಯ ಮೈತುಂಬಾ ಬ್ಲೇಡ್​ನಿಂದ ಹಲ್ಲೆಗೊಳಿಸಿ, ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾನೆ. ಈ ಸಣ್ಣ ಕಿರಾತಕರಿಂದ ಬಾಲಕಿ ಹೇಗೋ ತಪ್ಪಿಸಿಕೊಂಡಿದ್ದಾಳೆ. ಗಾಯಗೊಂಡ ಬಾಲಕಿ ಸ್ಥಿತಿ ಗಮನಿಸಿ ಸ್ಥಳೀಯರು ಆಕೆಯ ರಕ್ಷಿಸಿದ್ದಾರೆ. ತನ್ನ ಮೇಲೆ ನಡೆದ ಅಮಾನವೀಯ ಘಟನೆಯನ್ನ ಬಾಲಕಿ ಸ್ಥಳೀಯರಿಗೆ ವಿವರಿಸಿದ್ದಾಳೆ. ಅದೇ ಸ್ಥಳೀಯರು ಅಪ್ರಾಪ್ತೆಯನ್ನ ಆಸ್ಪತ್ರೆಗೆ ದಾಖಲಸಿದ್ದರು.

ಇಷ್ಟಕ್ಕೆ ಸುಮ್ಮನಾಗದ ಸ್ಥಳೀಯರು ಬಾಲಕರ ಪತ್ತೆ ಹಚ್ಚಿ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಅಪ್ರಾಪ್ತ ಆರೋಪಿಗಳನ್ನ ಹಸ್ತಾಂತರಿಸಿದ್ದಾರೆ. ಈ ಘಟನೆ ಕುರಿತು ಬಾಲಕನ ಮೇಲೆ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details