ವಿಜಯಪುರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿಯಿಂದಲೇ ಬಿರುಗಾಳಿ ಸಹಿತ ಭಾರಿ ಮಳೆ ಆಗಿದ್ದು, ಮರಗಳು ಧರೆಗೆ ಉರುಳಿವೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದಲ್ಲಿ 100 ವರ್ಷ ಇತಿಹಾಸವುಳ್ಳ ಬೃಹತ್ ಆಲದ ಮರ ರಾತ್ರಿ ಮಳೆಗೆ ಉರುಳಿ ಬಿದ್ದಿದೆ.
ಬಿರುಗಾಳಿ ಸಹಿತ ಭಾರಿ ಮಳೆ: ಧರೆಗುರುಳಿದ ಶತಮಾನದ ಆಲದ ಮರ - rain
ವಿಜಯಪುರ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಶತಮಾನ ಪೂರೈಸಿದ ಆಲದ ಮರವೊಂದು ಧರೆಗುರುಳಿದೆ. ಇನ್ನೊಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಧರೆಗುರುಳಿದ ಶತಮಾನದ ಆಲದಮರ
ಪಟ್ಟಣದ ಹಳೆ ಪಂಚಾಯತಿ ಕಟ್ಟಡದ ಮೇಲೆ ಮರ ಉರುಳಿದೆ. ಪಂಚಾಯತಿ ಹೊಸ ಕಟ್ಟಡಕ್ಕೆ ಶಿಫ್ಟ್ ಆಗಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಸತತ ಬರಗಾಲದಿಂದ ಬೆಂದು ಹೋಗಿದ್ದ ರೈತರ ಮುಖದಲ್ಲಿ ಮಳೆ ಸಂತಸ ಮೂಡಿಸಿದೆ. ಈ ಬಾರಿಯಾದರೂ ಮುಂಗಾರು ಮಳೆ ಕೈ ಹಿಡಿಯುತ್ತದೆ ಎನ್ನುವ ಆಶಾ ಭಾವನೆಯಲ್ಲಿ ರೈತರಿದ್ದಾರೆ.