ಚಿತ್ರದುರ್ಗ: ಜಿಲ್ಲೆಯಲ್ಲಿ ವರುಣನ ಅಬ್ಬರ ಭಾನುವಾರವೂ ಮುಂದುವರೆದಿದೆ. ಸಿಡಿಲು ಬಡಿದು ಓರ್ವ ಮೃತಪಟ್ಟ ಘಟನೆ ಹಿರಿಯೂರು ತಾಲೂಕಿನ ಆದಿವಾಲ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಹಿರಿಯೂರಲ್ಲಿ ವರುಣನ ಅಬ್ಬರ: ಸಿಡಿಲಿಗೆ ಓರ್ವ ಬಲಿ - heavy rain
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಗೊಲ್ಲರಹಟ್ಟಿಯಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.
ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿ
ಗೊಲ್ಲರಹಟ್ಟಿಯ ನಿವಾಸಿ ಆನಂದ್ (38) ಸಿಡಿಲು ಬಡಿದು ಸಾವನ್ನಪ್ಪಿದವ. ಜಮೀನಿನಿಂದ ಮನೆಗೆ ತೆರಳುವ ವೇಳೆ ಘಟನೆ ನಡೆದಿದೆ. ಆನಂದ್ ಅವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಆಧಾರವಿಲ್ಲದಂತಾಗಿದೆ.
ಕುಟುಂಬದ ಬೆನ್ನೆಲುಬಾಗಿದ್ದ ಆನಂದ ಅವರನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.