ಅಹಮದಾಬಾದ್:ಕಾಂಗ್ರೆಸ್ ತೊರೆದಿರುವ ಗುಜರಾತ್ ಶಾಸಕ ಅಲ್ಪೇಶ್ ಠಾಕೂರ್ ಭಾರತೀಯ ಜನತಾ ಪಾರ್ಟಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲ ಭಿನ್ನಾಭಿಪ್ರಾಯಗಳ ಕಾರಣದಿಂದ ಅಲ್ಪೇಶ್ ಠಾಕೂರ್ ಈ ವರ್ಷದ ಏಪ್ರಿಲ್ನಲ್ಲಿ ಕಾಂಗ್ರೆಸ್ ತೊರೆದಿದ್ದರು. ಅಲ್ಪೇಶ್ ಠಾಕೂರ್ ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊಂದಿದ್ದರು. ಆದರೆ, ಕಾಂಗ್ರೆಸ್ ಮಾಜಿ ಸಂಸದ ಜಗದೀಶ್ ಠಾಕೂರ್ರನ್ನು ಕಣಕ್ಕಿಳಿಸಿತ್ತು. ಇದು ಅಲ್ಪೇಶ್ ಮುನಿಸಿಗೆ ಕಾರಣ ಎನ್ನಲಾಗಿದೆ.