ಕರ್ನಾಟಕ

karnataka

ETV Bharat / briefs

ಗಂಗಾವತಿ ಎಪಿಎಂಸಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ.. - Gangavati apmc election results

ಇದಕ್ಕೂ ಮೊದಲು ಅಧ್ಯಕ್ಷ ಸ್ಥಾನಕ್ಕೆ ಒಟ್ಟು ನಾಲ್ಕು ಜನ ಅಕಾಂಕ್ಷಿಗಳಾಗಿದ್ದರು. ಆದರೆ, ಕೊನೆಯ ಘಳಿಗೆಯಲ್ಲಿ ಇಬ್ಬರನ್ನು ಕಣದಿಂದ ಹಿಂದಕ್ಕೆ ಸರಿಸುವಲ್ಲಿ ಯಶಸ್ವಿಯಾದ ನಾಯಕರು.

Gangavati apmc prasident election
Gangavati apmc prasident election

By

Published : Jun 1, 2020, 4:00 PM IST

ಗಂಗಾವತಿ :ಎಪಿಎಂಸಿ ಅಧ್ಯಕ್ಷ- ಉಪಾಧ್ಯಕರನ್ನು ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಕೊನೆಗೂ ಬಿಜೆಪಿ ಪಕ್ಷದ‌ ನಾಯಕರುಯಶಸ್ವಿಯಾಗಿದ್ದಾರೆ.

ನಿಗಧಿತ ಸಮಯದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಯರಡೋಣ ಕ್ಷೇತ್ರದ ಚಂದ್ರೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಾಪುರದ ನಿರ್ಮಲ ಬಾಗೋಡಿ ಎಂಬುವರು ಆಯ್ಕೆಯಾದರು.

ಇದಕ್ಕೂ ಮೊದಲು ಅಧ್ಯಕ್ಷ ಸ್ಥಾನಕ್ಕೆ ಒಟ್ಟು ನಾಲ್ಕು ಜನ ಅಕಾಂಕ್ಷಿಗಳಾಗಿದ್ದರು. ಆದರೆ, ಕೊನೆಯ ಘಳಿಗೆಯಲ್ಲಿ ಇಬ್ಬರನ್ನು ಕಣದಿಂದ ಹಿಂದಕ್ಕೆ ಸರಿಸುವಲ್ಲಿ ಯಶಸ್ವಿಯಾದ ನಾಯಕರು, ಕೊನೆಯ ಹಂತದಲ್ಲಿ ಕಣದಲ್ಲಿ ಉಳಿದ ಚಂದ್ರೇಗೌಡ ಹಾಗೂ ಕನಕಗಿರಿ ಕ್ಷೇತ್ರದ ದೇವಪ್ಪ ತೋಳದ ಅವರಿಗೆ ತಲಾ ಹತ್ತು ತಿಂಗಳು ಅಧಿಕಾರ ಹಂಚಿಕೆ ಮಾಡಿದರು.

ಮೊದಲ ಹಂತದ ಹತ್ತು ತಿಂಗಳಿಗೆ ಚಂದ್ರೇಗೌಡ, ಎರಡನೇ ಅವಧಿಗೆ ದೇವಪ್ಪ ಅವರನ್ನು ಆಯ್ಕೆ ಮಾಡಲು ಬಿಜೆಪಿ ನಾಯಕರು ಸಂಧಾನ ಸಭೆ ನಡೆಸಿ ಎಪಿಎಂಸಿ ಅಧಿಕಾರ ಹಂಚಿಕೆ ಮಾಡುವಲ್ಲಿ ಯಶಸ್ವಿಯಾದರು.

ABOUT THE AUTHOR

...view details