ಕರ್ನಾಟಕ

karnataka

ETV Bharat / briefs

SSLC ರಿಸಲ್ಟ್​: ಕಲಿಕೆಗೆ ಕೊನೆಯಿಲ್ಲ,ಮಗಳ ಜೊತೆ ತಂದೆಯೂ ಪಾಸ್​! - ತಂದೆ ಮಗಳು ಪಾಸ್​

46 ವರ್ಷದ ತಂದೆಯೊಬ್ಬರು ಮಗಳ ಜೊತೆ SSLC ಪರೀಕ್ಷೆ ಪಾಸು ಮಾಡಿದ್ದಾರೆ. ತಮಿಳುನಾಡಿನಲ್ಲಿ ಬೆಳಕಿಗೆ ಬಂದ ಅಪರೂಪದ ಬೆಳವಣಿಗೆ ಇಲ್ಲಿದೆ.

ಎಸ್​ಎಸ್​ಎಲ್​ಸಿ ರಿಸೆಲ್ಟ್

By

Published : Apr 30, 2019, 6:26 PM IST

ಪುದುಚೇರಿ:ಎಲ್ಲೆಡೆ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ್ದೇ ಮಾತುಕತೆ.. ಈ ನಡುವೆ ತಮಿಳುನಾಡಿನ ಪುದುಚೇರಿಯಿಂದ ಕುತೂಹಲಕಾರಿ ಸುದ್ದಿ ಬಂದಿದೆ. ಇಲ್ಲಿ ಪರೀಕ್ಷೆ ಬರೆದತಂದೆ ಮತ್ತು ಮಗಳು ಇಬ್ಬರೂ ಪಾಸಾಗಿದ್ದಾರೆ. ಛಲದಿಂದ ಓದಿ ಮಗಳು ತೇರ್ಗಡೆಯಾದ್ರೆ, ಕಲಿಕೆಗೆ ವಯಸ್ಸಿನ ತೊಡಕಿಲ್ಲ ಅನ್ನೋದನ್ನು ತಂದೆ ಪ್ರೂವ್ ಮಾಡಿದರು.

ಪ್ರಯತ್ನಕ್ಕೆ ಸೊಲಿಲ್ಲ! ತಂದೆ, ಮಗಳು ಎಸ್​ಎಸ್​ಎಲ್​ಸಿಯಲ್ಲಿ ಪಾಸ್

ನಮ್ಮ ರಾಜ್ಯದಂತೆ ಇವತ್ತು ಪಕ್ಕದ ತಮಿಳುನಾಡಿನಲ್ಲೂ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಇಲ್ಲಿನ ಪರೀಕ್ಷಾ ಕೇಂದ್ರದೆದುರು ತಂದೆ ಮತ್ತು ಮಗಳು ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದರು.

ಹುದ್ದೆಯಲ್ಲಿ ಬಡ್ತಿ ಪಡೆಯುವ ಸಂಬಂಧ ಪಿಡಬ್ಲ್ಯೂಡಿ ನೌಕರರಾಗಿರುವ ಸುಬ್ರಮಣಿಯನ್​ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು. ಇದೇ ವರ್ಷ ಮಗಳು ತಿರಿಗುಣಾ ಕೂಡ ಪರೀಕ್ಷೆ ಬರೆದಿದ್ದರು. ಇವತ್ತು ಇಬ್ಬರಿಗೂ ಸಿಹಿ ಸುದ್ದಿ ಸಿಕ್ಕಿದೆ.

2017ರಲ್ಲಿ ಎಂಟನೇ ತರಗತಿ ಪರೀಕ್ಷೆ ಬರೆದು ಪಾಸ್ ಆಗಿದ್ದ ಸುಬ್ರಮಣಿಯನ್‌, ಕಳೆದ ವರ್ಷ ಎಸ್ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು. ಆದ್ರೆ, ಗಣಿತ ಸೇರಿದಂತೆ ಮೂರು ವಿಷಯಗಳಲ್ಲಿ ಫೇಲ್‌ ಆಗಿದ್ದಾರೆ. ಪೂರಕ ಪರೀಕ್ಷೆಯಲ್ಲಿಯೂ ಸುಬ್ರಮಣಿಯನ್ ಉತ್ತೀರ್ಣರಾಗಲಿಲ್ಲ. ಕೊನೆಗೂ ಈ ಬಾರಿ ಅವರಿಗೆ ಯಶಸ್ಸು ಸಿಕ್ಕಿದೆ. ಜೊತೆಗೆ ಮಗಳೂ ತೇರ್ಗಡೆಯಾಗಿದ್ದು ಮನೆಯಲ್ಲಿ ಸಂತಸದ ಹೊನಲಿದೆ.

ABOUT THE AUTHOR

...view details