ಕರ್ನಾಟಕ

karnataka

ETV Bharat / briefs

ಲೋಕ ಸಮರಕ್ಕೆ ತಂದೆ - ಮಗಳು ಸಜ್ಜು... ಮುದ್ದಾಗಿ ಸಾಕಿದ ಅಪ್ಪನಿಗೆ ಪುತ್ರಿಯ ಸವಾಲ್​! - ಪುತ್ರಿಯ ಸವಾಲ್

ವಿಶಾಖಪಟ್ಟಣಂ: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ತೊರೆದು ಇತ್ತೀಚೆಗೆ ಟಿಡಿಪಿ ಸೇರಿದ್ದರು. ಕಿಶೋರ್ ಚಂದ್ರ ಅವರ ನಿರ್ಧಾರಕ್ಕೆ ಭರ್ಜರಿ ಟಾಂಗ್​ ಕೊಟ್ಟಿರುವ ಕಾಂಗ್ರೆಸ್​ ಅಪ್ಪನ ವಿರುದ್ಧ ಮಗಳನ್ನೇ ಕಣಕ್ಕಿಳಿಸಿದೆ. ಇದು ಆಂಧ್ರಪ್ರದೇಶ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಕೃಪೆ: eenadu.net

By

Published : Mar 20, 2019, 2:27 PM IST

ಜಿಲ್ಲೆಯ ಅರಕು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ತಂದೆ - ಮಗಳು ಅಖಾಡಕ್ಕೆ ಧುಮುಕ್ಕಿದ್ದಾರೆ. ಮುದ್ದಾಗಿ ಸಾಕಿರುವ ತಂದೆ ವಿರುದ್ಧವೇ ಮಗಳು ಪೈಪೋಟಿ ನಡೆಸಲು ಸಜ್ಜಾಗಿದ್ದಾರೆ. ಕೇಂದ್ರ ಮಾಜಿ ಮಂತ್ರಿ ಕಿಶೋರ್​ ಚಂದ್ರದೇವ ಮೂಲತಃ ಕಾಂಗ್ರೆಸ್​ ಪಕ್ಷದವರು. ರಾಜಕೀಯದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ ಕೂಡಾ. ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಅವರು ಇತ್ತೀಚೆಗೆ ಕಾಂಗ್ರೆಸ್​ ಪಕ್ಷ ತೊರೆದು ತೆಲುಗು ದೇಶಂ ಪಾರ್ಟಿಗೆ ಲಗ್ಗೆಯಿಟ್ಟರು. ಇವರಿಗೆ ಟಿಡಿಪಿ ಪಕ್ಷ ಅರಕು ಲೋಕಸಭಾ ಕ್ಷೇತ್ರದ ಎಂಪಿ ಟಿಕೆಟ್​ ನೀಡಿ ಆಹ್ವಾನಿಸಿದೆ.

ಇನ್ನು ಕಿಶೋರ್​ ಚಂದ್ರ ಅವರ ರಾಜಕೀಯ ವಾರಸುದಾರಳೆಂದೇ ಭಾವಿಸುತ್ತಿದ್ದ ಆತನ ಮಗಳು ಶ್ರುತಿದೇವಿ ಮಾತ್ರ ಕಾಂಗ್ರೆಸ್​ ಪಕ್ಷ ತೊರೆಯದೇ ಅಲ್ಲೇ ಉಳಿದುಕೊಂಡಿದ್ದಾರೆ. ಪ್ರಬಲ ನಾಯಕನನ್ನು ಕಳೆದುಕೊಂಡ ಕಾಂಗ್ರೆಸ್​ ಪಕ್ಷ ಅರಕು ಲೋಕಸಭಾ ಕ್ಷೇತ್ರದಲ್ಲಿ ಪೈಪೋಟಿಗೆ ಯಾರನ್ನು ನಿಲ್ಲಿಸಬೇಕೆಂಬ ಚಿಂತೆಗೀಡಾಗಿತ್ತು. ಬಳಿಕ ಆಲೋಚಿಸಿದ ಪಕ್ಷದ ಮುಖ್ಯಸ್ಥರು ಕಿಶೋರ್​ ಚಂದ್ರದೇವ ಮಗಳು ಶ್ರುತಿದೇವಿಗೆ ಟಿಕೆಟ್​ ನೀಡಿದ್ದಾರೆ. ಹೀಗಾಗಿ ತಂದೆ-ಮಗಳ ಮಧ್ಯ ಪೈಪೋಟಿ ನಡೆಯುತ್ತಿದೆ.

ಪರಿಸರ ಕಾನೂನು ವ್ಯಾಸಂಗ ಮುಗಿಸಿರುವ ಶ್ರುತಿದೇವಿ ಕಳೆದ ಮೂರು ಚುನಾವಣೆಯಲ್ಲಿ ತಮ್ಮ ತಂದೆ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿದ್ದಾಗ ಪ್ರಚಾರ ಕೈಗೊಂಡಿದ್ದರು. ಈಗ ಸ್ವತಃ ಅವರೇ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿ ತಂದೆ ವಿರುದ್ಧ ಸವಾಲ್​ ಹಾಕಿದ್ದಾರೆ. ಆದ್ರೆ ಅಭಿಮಾನಿಗಳು ಮಾತ್ರ ಯಾರ ಕೈ ಹಿಡಿಯಲಿದ್ದಾರೆ ಎಂಬುದು ಚುನಾವಣೆಯ ಬಳಿಕ ಗೊತ್ತಾಗಲಿದೆ.

ABOUT THE AUTHOR

...view details