ಕರ್ನಾಟಕ

karnataka

ETV Bharat / briefs

ಪಂತ್​,ರಾಯುಡುಗಿದೆ ಮತ್ತೊಂದು ಅವಕಾಶ... ವಿಶ್ವಕಪ್​ ಸ್ಟ್ಯಾಂಡ್‌ ಬೈ ಆಟಗಾರರಾಗಿ ಮೂವರ ಆಯ್ಕೆ - Rayudu

ವಿಶ್ವಕಪ್​ಗೆ ಇನ್ನು ಒಂದುವರೆ ತಿಂಗಳುಗಳ ಕಾಲಾವಾಕಾಶವಿದ್ದು, ಇಷ್ಟರಲ್ಲಿ ಆಯ್ಕೆಯಾಗಿರುವ 15 ರಲ್ಲಿ ಆಟಗಾರರಲ್ಲಿ ಯಾರಾದರು ಗಾಯಕ್ಕೆ ತುತ್ತಾದರೆ, ಪಂತ್​ ಹಾಗೂ ರಾಯುಡುರನ್ನು, ಬೌಲರ್​ಗಳಲ್ಲಿ ಸೈನಿರನ್ನು ಸ್ಟ್ಯಾಂಡ್​ ಬೈ ಆಟಗಾರರಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

pant

By

Published : Apr 17, 2019, 6:02 PM IST

ಮುಂಬೈ: ಅನುಭವಿ ರಾಯುಡು,ಪಂತ್​ ಹಾಗೂ ಯುವ ಬೌಲರ್​ ನವದೀಪ್​ ಸೈನಿ ವಿಶ್ವಕಪ್​ಗೆ ಸ್ಟ್ಯಾಂಡ್​ ಬೈ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ,

ವಿಶ್ವಕಪ್​ಗಾಗಿ ಮೊನ್ನೆ 15 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಇದರಲ್ಲಿ ಪಂತ್​ ಹಾಗೂ ಅಂಬಾಟಿ ರಾಯುಡುರನ್ನು ತಂಡದಿಂದ ಕೈಬಿಟ್ಟು ದಿನೇಶ್​ ಕಾರ್ತಿಕ್​ ಹಾಗೂ ವಿಜಯ್​ ಶಂಕರ್​ಗೆ ಸ್ಥಾನ ನೀಡಲಾಗಿತ್ತು.

ಇದರಿಂದ ಮಾಜಿ ಕ್ರಿಕೆಟಿಗರಾದ ಸುನಿಲ್​ ಗವಾಸ್ಕರ್​ ಪಂತ್​ ಕೈಬಿಟ್ಟಿರುವುದಕ್ಕೆ,ಹಾಗೂ ಗಂಭೀರ್​ ರಾಯುಡು ಬಿಟ್ಟಿದ್ದಕ್ಕೆ ಬೇಸರದ ಜೊತೆಗೆ ಕೆಲವು ಹೊಸ ಮುಖಗಳಿಗೆ ಆದ್ಯತೆ ನೀಡಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದರು.

ಇದೀಗ ವಿಶ್ವಕಪ್​ಗೆ ಇನ್ನು ಒಂದುವರೆ ತಿಂಗಳುಗಳ ಕಾಲಾವಾಕಾಶವಿದ್ದು, ಇಷ್ಟರಲ್ಲಿ ಆಯ್ಕೆಯಾಗಿರುವ 15 ರಲ್ಲಿ ಆಟಗಾರರಲ್ಲಿ ಯಾರಾದರು ಗಾಯಕ್ಕೆ ತುತ್ತಾದರೆ, ಪಂತ್​ ಹಾಗೂ ರಾಯುಡುರನ್ನು,ಬೌಲರ್​ಗಳಲ್ಲಿ ಸೈನಿರನ್ನು ಸ್ಟ್ಯಾಂಡ್​ ಬೈ ಆಟಗಾರರಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕಾಯ್ದಿರಿಸಲ್ಪಟ್ಟ ಈ ಮೂವರ ಆಟಗಾರರಲ್ಲಿ ಬದಲಾವಣೆ ಮಾಡುವ ಅವಕಾಶವಿದೆಯಾದರೂ, ಈ ಮೂವರ ಆಯ್ಕೆಯಲ್ಲಿ ಬದಲಾವಣೆ ಸಾಧ್ಯತೆ ಬಹುತೇಕ ಇಲ್ಲ, ಈ ಮೂವರ ಹೆಸರು ಫಿಕ್ಸ್​ ಎಂದು ಹೇಳಿದ್ದಾರೆ.

ABOUT THE AUTHOR

...view details