ಬೆಂಗಳೂರು:ಲೋಕಸಭೆ ಚುನಾವಣೆ ಮುಕ್ತಾಯವಾಗಿ, ಫಲಿತಾಂಶ ಬಂದರೂ ಇವಿಎಂ ಮೇಲಿನ ಆರೋಪಗಳು ನಿಂತಿಲ್ಲ. ಘಟಾನುಘಟಿ ನಾಯಕರ ಸೋಲಿಗೆ ಇವಿಎಂ ಕಾರಣ ಎಂದು ಪರಾಜಯಗೊಂಡ ಅಭ್ಯರ್ಥಿಗಳ ಆರೋಪಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕ ನಟರಾಜ್ ಕೃಷ್ಣಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕ ಎನ್.ಕೃಷ್ಣಪ್ಪ ಇವಿಎಂ ಅನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಅದು ಕ್ಯಾಲ್ಕುಲೇಟರ್ ಇದ್ದ ಹಾಗೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ನಿರ್ದೇಶಕ ನಟರಾಜ್ ಕೃಷ್ಣಪ್ಪ ಹೇಳಿದರು.
ಹ್ಯಾಕ್ ಮಾಡಿ ತೋರಿಸಿ ಎಂದು ಕೇಂದ್ರ ಚುನಾವಣಾ ಆಯೋಗ ಹ್ಯಾಕತಾನ್ ಏರ್ಪಡಿಸಿತ್ತು. ಆದ್ರೆ, ಆರೋಪ ಮಾಡಿದವರಲ್ಲಿ ಯಾರೂ ಮುಂದೆ ಬಂದು ಹ್ಯಾಕ್ ಮಾಡಲಿಲ್ಲ . ಇದಲ್ಲದೇ ಬ್ಲೂಟೂತ್ ಅಥವಾ ವೈಫೈ ಮುಖಾಂತರ ಹ್ಯಾಕ್ ಮಾಡಲು ಸಾಧ್ಯ ಎಂಬ ಆರೋಪವು ಸಾಧ್ಯವಿಲ್ಲ. ಇದು 'ಸ್ಟಾಂಡ್ ಆಲೋನ್ ಡಿವೈಸ್' ಎಂದು ಹೇಳಿದರು.
ಹಲವಾರು ಇವಿಎಂ ಯಂತ್ರಗಳನ್ನು ಕೆಡಿಸಿ ತಮಗೆ ಬೇಕಾದ ಹಾಗೆ ತಿರುಚಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಯಂತ್ರದಲ್ಲಿ ವಿಶೇಷವಾದ ಸಾಫ್ಟವೇರ್ ಅಳವಡಿಸಲಾಗಿದೆ. ಒಂದೊಮ್ಮೆ ತಿರುಚುವ ಯತ್ನ ಮಾಡಿದರೆ ಯಂತ್ರ ತಾನಾಗಿ ಸ್ಥಗಿತಗೊಂಡು ಲಾಕ್ ಆಗುತ್ತದೆ. ಇದನ್ನು ಸರಿ ಮಾಡುವುದಕ್ಕೆ ಪುನಃ ಫ್ಯಾಕ್ಟ್ರಿಗೆ ಕಳುಹಿಸಬೇಕಾಗುತ್ತದೆ. ಹಾಗಾಗಿ ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಮಾಹಿತಿ ಕೊಟ್ಟರು.