ಕರ್ನಾಟಕ

karnataka

ETV Bharat / briefs

ಮಹಾಚುನಾವಣೆಗೆ ಪಕ್ಷಗಳು ಖರ್ಚು ಮಾಡಿದ್ದೆಷ್ಟು?ಬಿಜೆಪಿಯದ್ದೇ ಸಿಂಹಪಾಲು!

2014ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಚುನಾವಣೆಯಲ್ಲಿ ವ್ಯಯಿಸಲಾದ ಹಣ ದುಪ್ಪಟ್ಟು ಎಂದು ವರದಿ ಹೇಳಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು 30 ಸಾವಿರ ಕೋಟಿಯಷ್ಟು ಹಣವನ್ನು ವಿವಿಧ ಪಕ್ಷಗಳು ಖರ್ಚು ಮಾಡಿದ್ದವು.

By

Published : Jun 4, 2019, 7:03 PM IST

ಖರ್ಚು

ನವದೆಹಲಿ: ಸುಮಾರು ಒಂದು ತಿಂಗಳಿಗೂ ಹೆಚ್ಚಿನ ಕಾಲ ನಡೆದ ಲೋಕಸಭಾ ಚುನಾವಣೆ ಮೇ 23ರಂದು ಫಲಿತಾಂಶ ಹೊರಬೀಳುವ ಮೂಲಕ ಚುನಾವಣಾ ಪ್ರಕ್ರಿಯೆ ಅಂತ್ಯವಾಗಿದೆ. ಇದೀಗ ಈ ಮಹತ್ವದ ಚುನಾವಣೆಯಲ್ಲಿ ರಾಜಕೀಯ ರಾಜಕೀಯ ಪಕ್ಷಗಳು ಮಾಡಿರುವ ಖರ್ಚಿನ ಮಾಹಿತಿ ಬಹಿರಂಗವಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿದೊಡ್ಡ ಹಬ್ಬ ಎಂದೇ ಪರಿಗಣಿಸಲ್ಪಡುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ 55 ಸಾವಿರದಿಂದ 60 ಸಾವಿರ ಹಣವನ್ನು ವಿವಿಧ ಪಕ್ಷಗಳು ವ್ಯಯಿಸಿದೆ ಎಂದು ಸೆಂಟರ್ ಫಾರ್​ ಮೀಡಿಯಾ ಸ್ಟಡೀಸ್​​ ತನ್ನ ವರದಿಯಲ್ಲಿ ಹೇಳಿದೆ.

ಮಾತಾಡೋ ಮೊದಲು ತಿಳಿದುಕೊಳ್ಳಿ.. ಸದಾನಂದಗೌಡರಿಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಸಿಎಂ ಹೆಚ್‌ಡಿಕೆ

2014ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಚುನಾವಣೆಯಲ್ಲಿ ವ್ಯಯಿಸಲಾದ ಹಣ ದುಪ್ಪಟ್ಟು ಎಂದು ವರದಿ ಹೇಳಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು 30 ಸಾವಿರ ಕೋಟಿಯಷ್ಟು ಹಣವನ್ನು ವಿವಿಧ ಪಕ್ಷಗಳು ಖರ್ಚು ಮಾಡಿದ್ದವು.

'ಪೋಲ್​​ ಎಕ್ಸ್​ಪೆಂಡಿಚರ್​: ದಿ 2019 ಎಲೆಕ್ಷನ್ಸ್' ಎನ್ನುವ ವರದಿಯಲ್ಲಿ ಈ ಬಾರಿಯ ಚುನಾವಣೆ ಭಾರತದ ಇತಿಹಾಸದಲ್ಲೇ ಅತ್ಯಂತ ದುಬಾರಿ ಎಂದು ಉಲ್ಲೇಖಿಸಿದೆ. ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಸರಿಸುಮಾರು ನೂರು ಕೋಟಿ ಖರ್ಚು ಮಾಡಿಲಾಗಿದ್ದರೆ, ಪ್ರತಿಯೊಬ್ಬನ ತಲೆಗೂ 700 ರೂಪಾಯಿ ವ್ಯಯಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೆಣ್ಣು ಕೊಟ್ಟ ಅತ್ತೆಗೆ ಎಸಿ ಕೊಟ್ಟ ಅಳಿಯ! ಹೀಗೊಬ್ಬ ಅಭಿಮಾನದ ಅಳಿಯ!

ವರದಿಯ ಪ್ರಕಾರ ಭಾರತೀಯ ಜನತಾ ಪಾರ್ಟಿ ಒಟ್ಟಾರೆ ವ್ಯಯಿಸಲಾದ ಹಣದಲ್ಲಿ ಶೇ.45ರಷ್ಟು ಖರ್ಚು ಮಾಡಿದೆ. ಕಾಂಗ್ರೆಸ್ ಶೇ. 20ರಷ್ಟು ಹಣವನ್ನು ವ್ಯಯಿಸಿದೆ.

1998ರ ಲೋಕಸಭಾ ಚುನಾವಣೆಯಲ್ಲಿ ಖರ್ಚಾದ ಹಣದ ಪ್ರಮಾಣ 2019ರ ಚುನಾವಣೆ ವೇಳೆಗೆ ಬರೋಬ್ಬರಿ ಆರು ಪಟ್ಟು ಹೆಚ್ಚಳ ಕಂಡಿದೆ. 1998ರಲ್ಲಿ ಆರು ಸಾವಿರ ಕೋಟಿ ಹಣವನ್ನು ರಾಜಕೀಯ ಪಕ್ಷಗಳು ವ್ಯಯಿಸಿದ್ದವು.

ABOUT THE AUTHOR

...view details