ಚಿತ್ರದುರ್ಗ:ಕೋಟೆನಾಡಿನಲ್ಲಿರುವ ಮಿನಿ ಊಟಿ ಎಂದೇ ಖ್ಯಾತಿಗೊಳಿಸಿರುವ ಜೋಗಿ ಮಟ್ಟಿ ವನ್ಯಧಾಮ ಇದೀಗ ಮಳೆ ಇಲ್ಲದೆ ಬರಡಾಗಿದೆ. ಸದಾ ಹಸಿರಿನ ಹೊದಿಕೆ ಹೊತ್ತು ಪ್ರವಾಸಿಗರನ್ನು ಸದಾ ತನ್ನತ್ತ ಸೆಳೆಯುತ್ತಿದ್ದಾ ಮಿನಿ ಊಟಿಯಲ್ಲಿ ಹಸಿರಿಲ್ಲದೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.
ಸದಾಕಾಲ ಇರುವ ಇಬ್ಬನಿ, ಕಾರ್ಮೋಡಗಳ ಓಡಾಟ, ದಟ್ಟ ಕಾನನದ ಹಸಿರು ಸಂಪೂರ್ಣ ಮಾಯವಾಗಿದೆ. ಪರಿಣಾಮ ಜೋಗಿ ಮಟ್ಟಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಜೋಗಿ ಮಟ್ಟಿ ವನ್ಯಧಾಮ ಪ್ರವಾಸಿಗರಿಲ್ಲದೆ ರೆಸಾರ್ಟ್ಗಳು ಬಿಕೋ ಎನ್ನುತ್ತಿವೆ. ಇನ್ನು ವನ್ಯ ಜೀವಿಗಳು ಕೂಡ ನೀರು-ಆಹಾರ ವಿಲ್ಲದೆ ಪರಿತಾಪಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ದೂರದ ಊರುಗಳಿಂದ ಆಗಮಿಸಿ ಜೋಗಿಮಟ್ಟಿ ವನ್ಯಧಾಮದ ಮಧ್ಯೆ ಇರುವ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡುತ್ತಿದ್ದ ಅದೆಷ್ಟೋ ಪ್ರವಾಸಿಗರು ಭೀಕರ ಬರಗಾಲದ ಪರಿಣಾಮ ಇತ್ತ ಸುಖಳಿಯುತ್ತಿಲ್ಲ.
ಸರಿ ಸುಮಾರು 10 ಕಿ.ಮೀ ದೂರ ಇರುವ ಕಾಡಿನ ಪ್ರದೇಶದ ರಸ್ತೆಯ ಉದ್ದಕ್ಕೂ ಮರಗಳಲ್ಲಿ ಹಸಿರೆಲೆ ಇಲ್ಲದೆ ವಿವಿಧ ಬಗೆಯ ಮರಳು ಬೋಳಾಕಾರದಲ್ಲಿವೆ. ಇನ್ನೂ ಕೆಲ ಮರಗಳು ಅಲ್ಪಸ್ವಲ್ಪ ಚಿಗುರಿದ್ದು, ಮನಸ್ಸಿಗೆ ಮುದ ನೀಡುವುದು ದೂರದ ಮಾತಾಗಿದೆ. ಇನ್ನೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವನ್ಯ ಜೀವಿಗಳು ಕಾಣಸಿಗುವುದು ಅಪರೂಪವಾಗಿದೆ.
ಒಟ್ಟಾರೆ ಪ್ರತಿ ಬಾರಿಯು ಹಚ್ಚಹಸಿರಿನಿಂದ ಮಂಜಿನ ಹನಿಗಳ ನಡುವೆ ಕಾಣಸಿಗುತ್ತಿದ್ದ ರಮಣೀಯ ದೃಶ್ಯ ಇದೀಗ ಸಂಪೂರ್ಣ ಮರೆಯಾಗಿದೆ.