ಕರ್ನಾಟಕ

karnataka

ETV Bharat / briefs

ಬಾಯಾರಿದವರಿಗೆ ತಂಪಾಗಿಸಲು ಬಂದಿತು 'ಮಹಾ'ಜೀವಜಲ.. ರೈತರಿಗೆ ಕಭಿ ಖುಷಿ ಕಭಿ ಗಮ್.. - ದೂದಗಂಗಾ

ಮಹಾರಾಷ್ಟ್ರ ಸರ್ಕಾರ ಬಾಕಿ ಇರುವ 5 ಟಿಎಂಸಿ ನೀರನ್ನು ಕಾಳಮ್ಮವಾಡಿ ಜಲಾಶಯದಿಂದ ವೇದಗಂಗಾ, ದೂದಗಂಗಾ ಜಲಾಶಯಕ್ಕೆ ಹರಿಸಿದೆ. ಇದರಿಂದ ನದಿ ತೀರದ ರೈತರು ಸಂತಸಗೊಂಡಿದ್ದಾರೆ.

5 ಟಿಎಂಸಿ ನೀರನ್ನು ಕಾಳಮ್ಮವಾಡಿ ಜಲಾಶಯದಿಂದ ವೇದಗಂಗಾ, ದೂದಗಂಗಾ ಜಲಾಶಯಕ್ಕೆ ಹರಿಸಿದ ಮಹರಾಷ್ಟ್ರ ಸರ್ಕಾರ

By

Published : May 12, 2019, 7:49 PM IST

ಚಿಕ್ಕೋಡಿ : ಮಹಾರಾಷ್ಟ್ರ ಸರ್ಕಾರ ಕಾಳಮ್ಮವಾಡಿ ಜಲಾಶಯದಿಂದ ಬಾಕಿ ಇರುವ 500 ಕ್ಯೂಸೆಕ್ ನೀರನ್ನು ರಾಜ್ಯದ ವೇದಗಂಗಾ ಹಾಗೂ ದೂದಗಂಗಾ ನದಿಗೆ ಹರಿಸಿದೆ. ಈ ನೀರು ನದಿ ತೀರದ ಜನರಲ್ಲಿ ಮಾತ್ರ ಹರ್ಷ ಮೂಡಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಒಪ್ಪಂದದ ಪ್ರಕಾರ ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ಅಂತ್ಯದವರೆಗೆ ಕಾಳಮ್ಮವಾಡಿ ಜಲಾಶಯದಿಂದ ರಾಜ್ಯಕ್ಕೆ ಬಿಡುಗಡೆ ಮಾಡಲಾಗುವ ಒಟ್ಟು 4 ಟಿಎಂಸಿ ನೀರಿನ ಪೈಕಿ ಈಗಾಗಲೇ 3.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿತ್ತು. ಉಳಿದ 500 ಕ್ಯೂಸೆಕ್‌ ನೀರನ್ನು ಈಗ ಬಿಡಲಾಗಿದೆ. ನೀರು ಕೃಷ್ಣಾ ನದಿಗೆ ಬಂದು ತಲುಪಿದರೂ ಸಹಿತ ಚಿಕ್ಕೋಡಿ ತಾಲೂಕಿನ ಜನರಿಗೆ ಮಾತ್ರ ಇದರ ಲಾಭ ಹೆಚ್ಚು ಆಗಲ್ಲ.

5 ಟಿಎಂಸಿ ನೀರನ್ನು ಕಾಳಮ್ಮವಾಡಿ ಜಲಾಶಯದಿಂದ ವೇದಗಂಗಾ, ದೂದಗಂಗಾ ಜಲಾಶಯಕ್ಕೆ ಹರಿಸಿದ ಮಹರಾಷ್ಟ್ರ ಸರ್ಕಾರ

ಯಾಕಂದ್ರೆ, ಈಗಾಗಲೇ ನದಿಯಲ್ಲಿ ರೈತರು ನೀರಿಗಾಗಿ ಬಾವಿಗಳನ್ನು ತೆಗೆಸಿದ್ದಾರೆ. ಅವುಗಳು ಭರ್ತಿ ಆಗಿ ನೀರು ಮುಂದೆ ಬರಲು ಸಾಧ್ಯವಿಲ್ಲ. ಈ ನೀರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿಗೆ ಮಾತ್ರ ಸೀಮಿತವಾಗುತ್ತೆ. ಉಳಿದ ತಾಲೂಕುಗಳು ಹಾಗೂ ಬಿಜಾಪೂರ, ಬಾಗಲಕೋಟ ಜಿಲ್ಲೆಗಳಿಗೆ ಈ ನೀರು ತಲುಪುವುದಿಲ್ಲ. ಇದರಿಂದ ಕೆಲವು ರೈತರಿಗೆ ಮಾತ್ರ ಉಪಯುಕ್ತ. ಉಳಿದ ರೈತರಿಗೆ ನಿರಾಶೆಯಾಗಿದೆ.

ಈಗಾಗಲೇ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ವಾರದ ಹಿಂದೆ ಮುಖ್ಯಮಂತ್ರಿಗೆ ಹಾಗೂ ನೀರಾವರಿ ಸಚಿವರಿಗೆ ಭೇಟಿಯಾಗಿ ನೀರು ಬಿಡುವಂತೆ ಒತ್ತಾಯ‌ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ.

ABOUT THE AUTHOR

...view details