ಹೈದರಾಬಾದ್:ಕೊರೊನಾ ಲಸಿಕೆ ಸ್ಪುಟ್ನಿಕ್-ವಿ ಯ ತುರ್ತು ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಮೇ ಅಂತ್ಯದ ವೇಳೆಗೆ ರಷ್ಯಾದ ಲಸಿಕೆಯು ಭಾರತದಲ್ಲಿ ಬಳಕೆಗಾಗಿ ಲಭ್ಯವಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.
ಸೆಪ್ಟೆಂಬರ್ 2020 ರಲ್ಲಿ, ಡಾ. ರೆಡ್ಡೀಸ್ ಮತ್ತು ಆರ್‌ಡಿಐಎಫ್ ಭಾರತದಲ್ಲಿ ಸ್ಪುಟ್ನಿಕ್-ವಿ ಯ ಕ್ಲಿನಿಕಲ್ ಟ್ರಯಲ್ಗಳನ್ನು ನಡೆಸಲು ಹಾಗೂ ಲಸಿಕೆಯ ಪ್ರಥಮ 100 ಮಿಲಿಯನ್ ಡೋಸ್ಗಳನ್ನು ವಿತರಿಸಲು ಒಪ್ಪಂದ ಮಾಡಿಕೊಂಡಿದ್ದವು. ನಂತರ ಲಸಿಕೆ ವಿತರಣೆಯ ಪ್ರಮಾಣವನ್ನು 125 ಮಿಲಿಯನ್ ಡೋಸ್ಗಳಿಗೆ ಹೆಚ್ಚಿಸಲಾಗಿದೆ. ಗಮಾಲೆಯಾ ನ್ಯಾಷನಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೊಬಯಾಲಜಿ ಸಂಸ್ಥೆಯು ಸ್ಪುಟ್ನಿಕ್-ವಿ ಲಸಿಕೆಯನ್ನು ತಯಾರಿಸಿದೆ.
ಈ ವರ್ಷದ ಮೊದಲ ತ್ರೈಮಾಸಿಕದಿಂದ ಮೊದಲ ಬ್ಯಾಚ್‌ಗಳನ್ನು ಆಮದು ಮಾಡಿಕೊಳ್ಳಲು ನಾವು ಗುರಿ ಹೊಂದಿದ್ದೇವೆ. ಮೇ ಅಂತ್ಯದ ವೇಳೆಗೆ ಅವುಗಳನ್ನು ಪಡೆಯಲು ನಾವು ಪ್ರಯತ್ನಿಸುತ್ತೇವೆ, ಎಂದು ಡಾ. ರೆಡ್ಡೀಸ್ ವಕ್ತಾರರು ತಿಳಿಸಿದ್ದಾರೆ.