ವಿಶಾಖಪಟ್ಟಣಂ:ಐಪಿಎಲ್ನ ಎಲಿಮಿನೇಟರ್ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಡೆಲ್ಲಿ ತಂಡ ಎರಡು ವಿಕೆಟ್ಗಳ ಗೆಲುವು ದಾಖಲು ಮಾಡಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದೆ.
IPLನಲ್ಲಿ ಮೊದಲ ಸಲ 'ಪ್ಲೇ ಆಫ್' ಗೆದ್ದ ಡೆಲ್ಲಿ... ಪಂತ್ ಆಟಕ್ಕೆ ಸೆಹ್ವಾಗ್ ಫಿದಾ! - ವಿರೇಂದ್ರ ಸೆಹ್ವಾಗ್
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಪ್ಲೇ-ಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಶಾಕ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಕ್ವಾಲಿಫೈಯರ್ ಹಂತಕ್ಕೆ ಲಗ್ಗೆ ಹಾಕಿದೆ.
ವಿಶಾಖಪಟ್ಟಣಂನ ವಿಡಿಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ನೀಡಿದ್ದ 163ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಡೆಲ್ಲಿ ಅನೇಕ ಸಲ ನಾಟಕೀಯ ತಿರುವು ಪಡೆದುಕೊಂಡು 19.5ಓವರ್ಗಳಲ್ಲಿ8ವಿಕೆಟ್ ಕಳೆದುಕೊಂಡು 165ರನ್ಗಳಿಕೆ ಮಾಡಿ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ತಂಡ ಇದೇ ಮೊದಲ ಬಾರಿಗೆ ಐಪಿಎಲ್ ನಾಕೌಟ್ ಹಂತದಲ್ಲಿ ಗೆಲುವು ದಾಖಲಿಸಿದೆ. ಈ ತಂಡ ಈ ಹಿಂದೆ ನಾಲ್ಕು ಬಾರಿ ‘ಪ್ಲೇ ಆಫ್’ ಹಂತದಲ್ಲಿ ಎಡವಿತ್ತು. 2008,2009 ಹಾಗೂ 2012ರಲ್ಲಿ ಸೋಲು ಕಂಡಿತು.
ಡೆಲ್ಲಿ ತಂಡದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರಂಭಿಕ ಪೃಥ್ವಿ ಶಾ ಹಾಗೂ ತಂಡ ಸಂಕಷ್ಟಕ್ಕೆ ಸಿಲುಕಿದ ವೇಳೆ ಅಬ್ಬರಿಸಿದ ರಿಷಭ್ ಪಂತ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಡೆಲ್ಲಿ ತಂಡದ ಪ್ರದರ್ಶನಕ್ಕೆ ಟೀಂ ಇಂಡಿಯಾ ಮಾಜಿ ಪ್ಲೇಯರ್ ವಿರೇಂದ್ರ ಸೆಹ್ವಾಗ್ ಫುಲ್ ಖುಷ್ ಆಗಿದ್ದು, ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಉದಯೋನ್ಮುಖ ಆಟಗಾರ ರಿಷಭ್ ಪಂತ್ ಬ್ಯಾಟಿಂಗ್ಗೆ ವೀರೂ ಫಿದಾ ಆಗಿದ್ದಾರೆ.