ಕರ್ನಾಟಕ

karnataka

By

Published : May 13, 2019, 3:27 PM IST

ETV Bharat / briefs

ಹೊಸ ಚೆನ್ನೈ ತಂಡಕ್ಕೆ ಸದ್ಯದಲ್ಲೇ ರೂಪುರೇಷೆ... ಧೋನಿಯಿಂದ ನಡೆಯಲಿದೆ ಟ್ಯಾಲೆಂಟ್ ಹಂಟ್..!

ನಾಯಕ ಎಂ.ಎಸ್​.ಧೋನಿ ವಿಶ್ವಕಪ್​ನಿಂದ ಮರಳಿದ ಬಳಿಕ ಹೊಸ ಚೆನ್ನೈ ತಂಡದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಉಳಿದ ತಂಡಗಳು ಹೇಗೆ ಹೊಸ ಮುಖಗಳಿಗೆ ಮಣೆ ಹಾಕಿದೆಯೋ ಚೆನ್ನೈ ಸಹ ಅದೇ ಹಾದಿ ಹಿಡಿಯುವ ಸೂಚನೆಯನ್ನು ಫ್ಲೆಮಿಂಗ್ ವ್ಯಕ್ತಪಡಿಸಿದ್ದಾರೆ.

ಧೋನಿ

ಹೈದರಾಬಾದ್: ಈ ಬಾರಿಯ ಐಪಿಎಲ್​​ನಲ್ಲಿ ರೋಚಕ ಸೋಲು ಅನುಭವಿಸಿದ ಬಳಿಕ ಮುಂದಿನ ಆವೃತ್ತಿ ಬಗ್ಗೆ ಚೆನ್ನೈ ಸೂಪರ್​​ ಕಿಂಗ್ಸ್ ಕೋಚ್ ಸ್ಟೀಫನ್​ ಫ್ಲೆಮಿಂಗ್​ ಮಾತನಾಡಿದ್ದಾರೆ.

"ಒಂದು ತಂಡದಲ್ಲಿನ ಆಟಗಾರರ ಗರಿಷ್ಠ ವಯಸ್ಸು 34 ಆಗಿರುತ್ತದೆ. ಆದರೆ ನಮ್ಮ ತಂಡ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ರನ್ನರ್ ಅಪ್​ ಆಗಿದೆ. ಇದು ನಿಜಕ್ಕೂ ಆಶಾದಾಯಕ ವಿಚಾರ."

ಹೆಚ್ಚಿನ ಓದಿಗಾಗಿ:

ಮುಂಬೈಕರ್‌ ರೋ'ಹಿಟ್‌' 4 ಅಲ್ಲ, 5 ಬಾರಿ IPL ಚಾಂಪಿಯನ್‌.. ಅದು ಹೀಗೆ!

"ಫಲಿತಾಂಶ ಹಾಗೂ ಸಂಪೂರ್ಣ ಆವೃತ್ತಿಯ ವಿಮರ್ಶೆಗೆ ಕೆಲ ಸಮಯದ ಅಗತ್ಯವಿದೆ. ಒಂದು ಆವೃತ್ತಿಯಲ್ಲಿ ಚಾಂಪಿಯನ್ ಆಗಿ ನಂತರದ ಸೀಸನ್​ನಲ್ಲಿ ರನ್ನರ್ ಅಪ್ ಆಗಿದ್ದರೆ ಅದು ಅತ್ಯುತ್ತಮ ವಿಚಾರ."

"ಇವೆಲ್ಲದರ ಹೊರತಾಗಿ ಚೆನ್ನೈ ಬಹುತೇಕ ಹಿರಿಯ ಆಟಗಾರರ ತಂಡ ಎನ್ನುವುದನ್ನು ಒಪ್ಪಿಕೊಳ್ಳಬೇಕು. ತಂಡವನ್ನು ಸಂಪೂರ್ಣವಾಗಿ ಮರು ನಿರ್ಮಾಣ ಮಾಡಬೇಕಾದ ಕಾಲಘಟ್ಟದಲ್ಲಿದ್ದೇವೆ."

"ನಾಯಕ ಎಂ.ಎಸ್​.ಧೋನಿ ವಿಶ್ವಕಪ್​ನಿಂದ ಮರಳಿದ ಬಳಿಕ ಹೊಸ ಚೆನ್ನೈ ತಂಡದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ." ಉಳಿದ ತಂಡಗಳು ಹೇಗೆ ಹೊಸ ಮುಖಗಳಿಗೆ ಮಣೆ ಹಾಕಿದೆಯೋ ಚೆನ್ನೈ ಸಹ ಅದೇ ಹಾದಿ ಹಿಡಿಯುವ ಸೂಚನೆಯನ್ನು ಫ್ಲೆಮಿಂಗ್ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಓದಿಗಾಗಿ:

ಔಟ್..ನಾಟೌಟ್​..! ನೆಟ್ಟಿಗರ ತಲೆಕೆಡಿಸಿದ ಧೋನಿ ರನೌಟ್​..!

"ಧೋನಿ ವಿಶ್ವಕಪ್​ ವೇಳೆ ಉಳಿದ ತಂಡ ಪ್ರತಿಭಾನ್ವಿತ ಆಟಗಾರರನ್ನು ಗಮನಿಸಲಿದ್ದಾರೆ. ಒಂದು ಸಮತೋಲಿತ ತಂಡವನ್ನು ಕಟ್ಟುವಲ್ಲಿ ಇದು ಸಹಕಾರಿಯಾಗಲಿದೆ" ಎಂದು ಸಿಎಸ್​ಕೆ ಕೋಚ್ ಹೇಳಿದ್ದಾರೆ.

"ನಾಯಕ ಧೋನಿ ರನೌಟ್​ ನಿಜಕ್ಕೂ ಪಂದ್ಯದ ಟರ್ನಿಂಗ್ ಪಾಯಿಂಟ್. ಆದರೆ ಪಂದ್ಯ ಕೊನೆಯ ಎಸೆತದ ತನಕ ಬರುತ್ತದೆ ಎನ್ನುವ ಆಲೋಚನೆ ಇರಲಿಲ್ಲ" ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.

ABOUT THE AUTHOR

...view details