ಕರ್ನಾಟಕ

karnataka

ETV Bharat / briefs

ಬಡವರ ನೆರವಿಗೆ ಸರ್ಕಾರ: 225 ಕೋಟಿ ವೆಚ್ಚದ ಐರಾವತ ಯೋಜನೆಗೆ ಸಿಎಂ ಚಾಲನೆ - ಐರಾವತ ಯೋಜನೆ

ರಾಜ್ಯದ ಎಸ್​ಸಿ, ಎಸ್​ಟಿ ಯುವಕ, ಯುವತಿಯರ ಸಬಲೀಕರಣ ಉದ್ದೇಶದಿಂದ 225 ಕೋಟಿ ವೆಚ್ಚದ ಐರಾವತ ಯೋಜನೆ ಅಡಿಯಲ್ಲಿ 200 ಫಲಾನುಭವಿಗಳಿಗೆ ಸಿಎಂ ಕುಮಾರಸ್ವಾಮಿ ಕಾರುಗಳನ್ನ ವಿತರಿಸುವ ಮೂಲಕ ಚಾಲನೆ ನೀಡಿದರು. ವಿಧಾನಸೌಧದ ಎದುರು ನಡೆದ ಕಾರ್ಯಕ್ರಮದಲ್ಲಿ ಸಿಎಂ ಹಸಿರು ನಿಶಾನೆ ತೋರಿಸಿದರು.

225 ಕೋಟಿ ವೆಚ್ಚದ ಐರಾವತ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

By

Published : May 30, 2019, 7:56 PM IST

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಯುವಜನರು ಆರ್ಥಿಕರಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹಮ್ಮಿಕೊಂಡ ಐರಾವತ ಮಹಾತ್ವಾಕಾಂಕ್ಷೆಯ ಯೋಜನೆ ಅಡಿ 200 ಫಲಾನುಭವಿಗಳಿಗೆ ಕಾರ್​ ಒದಗಿಸಿ ಗುರುವಾರ ವಿಧಾನಸೌಧದ ಎದುರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

225 ಕೋಟಿ ವೆಚ್ಚದ ಐರಾವತ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಈ ಯೋಜನೆಯಡಿ 5 ಲಕ್ಷ ಮೊತ್ತದ ಕಾರುಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಕರಿಗೆಟ್ಯಾಕ್ಸಿ ಖರೀದಿಸಲು 5 ಲಕ್ಷ ರೂ ಹಾಗೂ ಯುವತಿಯರಿಗೆ ರೂ. 6 ಲಕ್ಷ ಸಹಾಯಧನವನ್ನ ಇಲಾಖೆ ವತಿಯಿಂದ ನೀಡಲಾಗುತ್ತದೆ. ಟ್ಯಾಕ್ಸಿ ಬೆಲೆಯ ಉಳಿದ ಮೊತ್ತವನ್ನು ಬ್ಯಾಂಕ್, ಹಣಕಾಸು ಸಂಸ್ಥೆ ಮೂಲಕ ಪಡೆಯಬೇಕು ಅಥವಾ ಫಲಾನುಭವಿ ಸ್ವಂತ ಹಣಕಾಸು ವ್ಯವಸ್ಥೆ ಮಾಡಿಕೊಂಡಲ್ಲಿ ಸಹಾಯಧನವನ್ನು ವಾಹನ ಖರೀದಿಗೆ ಬಿಡುಗಡೆ ಮಾಡಲು ಅವಕಾಶ ಇರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮಾಜಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷೆ ಯೋಚನೆ ಇದಾಗಿದ್ದು. ಸರ್ಕಾರ 225 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿದೆ. ಐರಾವತ ಯೋಜನೆಯಡಿ ನಿರುದ್ಯೋಗ ಯುವಕ ಯುವತಿಯರನ್ನು ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶವಿದೆ. ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ ವಾಹನಗಳನ್ನು ನಿರ್ವಹಣೆ ಮತ್ತು ಚಾಲನೆಯ ಮಾಡುವಲ್ಲಿ ಓಲಾ, ಉಬರ್ ಸಂಸ್ಥೆಗಳಿಂದ ಫಲಾನುಭವಿಗಳಿಗೆ ತರಬೇತಿ ದೊರಕಿಸಿಕೊಟ್ಟು, ಹೆಚ್ಚಿನ ಆದಾಯ ಗಳಿಸುವಲ್ಲಿ ಸಹಕಾರಿ ಆಗಲಿದೆ ಎನ್ನಲಾಗಿದೆ.

ABOUT THE AUTHOR

...view details