ಜೈಪುರ:ವಿಶ್ವಕ್ರಿಕೆಟ್ನ ಯುನಿವರ್ಸಲ್ ಬಾಸ್ ಎಂದೇ ಖ್ಯಾತರಾಗಿರುವ ವಿಂಡೀಸ್ನ ಕ್ರಿಸ್ಗೇಲ್ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 9 ರನ್ಗಳಿಸಿದ್ದ ವೇಳೆ ಐಪಿಎಲ್ ಇತಿಹಾಸದಲ್ಲಿ ಕಡಿಮೆ ಇನಿಂಗ್ಸ್ನಲ್ಲಿ 4000 ಗಡಿದಾಟಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.
ಐಪಿಎಲ್ನಲ್ಲಿ 75 ಇನಿಂಗ್ಸ್ನಲ್ಲಿ 3 ಸಾವಿರ ರನ್ ಗಡಿ ದಾಟುವ ಮೂಲಕ ಕಡಿಮೆ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ ಆಟಗಾರ ಆಟಗಾರ ಎನಿಸಿದ್ದರು. ಇದೀಗ ವೇಗವಾಗಿ 4000 ರನ್ಗಳಿಸಿದ ದಾಖಲೆ ಅವರ ಪಾಲಾಗಿದೆ. ಜೊತೆಗೆ ಈ ಸಾಧನೆ ಮಾಡಿದ 2ನೇ ವಿದೇಶಿ ಆಟಗಾರ ಎನಿಸಿದರು. ಇದಕ್ಕು ಮೊದಲು ಡೇವಿಡ್ ವಾರ್ನರ್ ಈ ದಾಖಲೆ ಮಾಡಿದ್ದರು.